Publish Date: Sat, 20 Jul 2019 (10:01 IST)
Updated Date: Sat, 20 Jul 2019 (10:08 IST)
ಬೆಂಗಳೂರು: ಬಹಳ ದಿನಗಳ ನಂತರ ರಾಧಿಕಾ ಪಂಡಿತ್ ಅಭಿನಯದ ಆದಿಲಕ್ಷ್ಮಿ ಪುರಾಣ ಸಿನಿಮಾ ಮತ್ತು ಚಿರು ಸರ್ಜಾ ಅಭಿನಯದ ಸಿಂಗ ನಿನ್ನೆ ಒಂದೇ ದಿನಕ್ಕೆ ಬಿಡುಗಡೆಯಾಗಿ ಪ್ರೇಕ್ಷಕರು ವೀಕ್ಷಿಸಿ ತಮ್ಮ ಅಭಿಪ್ರಾಯ ಹೇಳಿಯಾಗಿದೆ.
ಆದಿಲಕ್ಷ್ಮಿ ಪುರಾಣ ಸಿನಿಮಾ ನೋಡಿ ಬಂದ ಪ್ರೇಕ್ಷಕರು ರಾಧಿಕಾರನ್ನು ಬಹಳ ದಿನಗಳ ನಂತರ ತೆರೆ ಮೇಲೆ ನೋಡಿ ಖುಷಿಪಟ್ಟಿದ್ದಾರೆ. ಹಳೇ ಕತೆಯಾದರೂ, ಹೊಸದಾಗಿ ತೋರಿಸಲಾಗಿದೆ. ರಾಧಿಕಾ ಬಬ್ಲಿ ಕ್ಯಾರೆಕ್ಟರ್, ನಿರೂಪ್ ಗೆ ಒಪ್ಪುವ ಪಾತ್ರ ಇದು ಎಂದು ಪ್ರೇಕ್ಷಕರು ಬೆನ್ನುತಟ್ಟಿದ್ದಾರೆ. ಆದರೆ ಡೈಲಾಗ್ ಗಳು, ಕತೆಯಲ್ಲಿ ಇನ್ನೂ ಹೊಸತನ ತರಬಹುದಿತ್ತು ಎಂಬುದು ಪ್ರೇಕ್ಷಕರ ಅಭಿಪ್ರಾಯ.
ಇತ್ತ ಸಿಂಗ ನೋಡಿರುವ ಪ್ರೇಕ್ಷಕರು ಚಿರು ಸರ್ಜಾ ಮಾಸ್ ಎಂಟ್ರಿಗೆ ಖುಷಿಪಟ್ಟಿದ್ದಾರೆ. ಒಂದು ಮಾಸ್ ಸಿನಿಮಾ ಆಗಲು ಬೇಕಾಗುವ ಎಲ್ಲಾ ಅಂಶಗಳನ್ನೂ ಇಲ್ಲಿ ನೀಡಲಾಗಿದೆ. ಹೀಗಾಗಿ ಇದು ಮಾಸ್ ಪ್ರೇಕ್ಷಕರಿಗೆ ಇಷ್ಟವಾಗಿದೆ. ಮದುವೆ ಎಂದರೆ ಮಾರುದೂರ ಓಡುವ ನಾಯಕನಿಗೆ ಮದುವೆ ಮಾಡಿಸಲು ಒದ್ದಾಡುವ ಅಮ್ಮನ ನಡುವಿನ ಕತೆ. ಇದರ ನಡುವೆ ಆಕ್ಷನ್, ಸೆಂಟಿಮೆಂಟ್, ಲವ್ ಎಲ್ಲಾ ಸೇರಿ ಪ್ರೇಕ್ಷಕರಿಗೆ ಇಷ್ಟವಾಗಿದೆ.