Publish Date: Wed, 06 Sep 2023 (17:30 IST)
Updated Date: Wed, 06 Sep 2023 (17:32 IST)
ಬೆಂಗಳೂರು: ಚಿಕ್ಕಮಗಳೂರಿನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಗಿಚ್ಚಿ ಗಿಲಿ ಗಿಲಿ ಖ್ಯಾತಿಯ ನಟ ಚಂದ್ರಪ್ರಭಾ ಹಿಟ್ ಆಂಡ್ ರನ್ ಮಾಡಿದ್ದಾರೆ ಎಂಬ ಆರೋಪಗಳಿಗೆ ಅವರು ಸ್ಪಷ್ಟನೆ ನೀಡಿದ್ದಾರೆ.
ರಾತ್ರಿ ಶೂಟಿಂಗ್ ಮುಗಿಸಿಕೊಂಡು ಹೋಗುವಾಗ ಬೈಕ್ ಸವಾರನೇ ನನ್ನ ಕಾರಿಗೆ ಡಿಕ್ಕಿ ಹೊಡೆದಿದ್ದಾನೆ. ನಾನೇ ಕಾರು ಚಲಾಯಿಸುತ್ತಿದ್ದೆ. ಆದರೆ ಡಿಕ್ಕಿ ಹೊಡೆದ ಮೇಲೆ ನಾನು ಓಡಿ ಹೋಗಿಲ್ಲ. ಆಸ್ಪತ್ರೆಗೆ ದಾಖಲಿಸಿದ್ದೆ. ಬೈಕ್ ಸವಾರ ಮದ್ಯಪಾನ ಮಾಡಿದ್ದ ಎಂದಿದ್ದಾರೆ.
ಸದ್ಯಕ್ಕೆ ಘಟನೆ ಬಗ್ಗೆ ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಬೈಕ್ ಸವಾರನ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.