Publish Date: Wed, 06 Sep 2023 (17:23 IST)
Updated Date: Wed, 06 Sep 2023 (17:24 IST)
Photo Courtesy: Instagram
ಬೆಂಗಳೂರು: ನಟಿ ರಮ್ಯಾ ತಮ್ಮ ಗೆಳತಿಯರ ಜೊತೆ ವಿದೇಶ ಪ್ರವಾಸದಲ್ಲಿದ್ದರೆ ಇತ್ತ ಕೆಲವು ಮಾಧ್ಯಮಗಳಲ್ಲಿ ನಟಿಗೆ ಹೃದಯಾಘಾತವಾಗಿದೆ ಎಂಬ ಸುಳ್ಳು ಸುದ್ದಿ ಹರಡಿತ್ತು.
ಅಸಲಿಗೆ ರಮ್ಯಾ ಜಿನಿವಾದಲ್ಲಿ ಪ್ರವಾಸ ಮಾಡುತ್ತಿದ್ದಾರೆ. ಈ ನಡುವೆ ಅವರಿಗೆ ಹೃದಯಾಘಾತವಾಗಿದೆ ಎಂಬ ಸುದ್ದಿ ಹರಡಿತ್ತು. ಇದು ಅಭಿಮಾನಿಗಳಿಗೆ ತೀವ್ರ ಆತಂಕ ತಂದಿತ್ತು. ಇತ್ತೀಚೆಗೆ ಚಿಕ್ಕ ವಯಸ್ಸಿನ ಕಲಾವಿದರಿಗೆ ಹೃದಯಾಘಾತವಾದ ಅನೇಕ ಸುದ್ದಿಗಳನ್ನು ನೋಡಿದ್ದೇವೆ. ಹೀಗಾಗಿ ಸಹಜವಾಗಿಯೇ ಅಭಿಮಾನಿಗಳು ಆತಂಕಕ್ಕೀಡಾಗಿದ್ದರು.
ಆದರೆ ಇದೆಲ್ಲಾ ಸುಳ್ಳು ಸುದ್ದಿಯಾಗಿದ್ದು, ರಮ್ಯಾ ಈಗ ತವರಿನತ್ತ ಆರೋಗ್ಯವಾಗಿಯೇ ಮರಳುತ್ತಿದ್ದಾರೆ ಎಂದು ತಿಳಿದುಬಂದಿದೆ.