ಬೆಂಗಳೂರು: ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಸಿನಿಮಾಗಳೆಂದರೆ ಪ್ರೇಕ್ಷಕರಲ್ಲಿ ಕುತೂಹಲವಿರುತ್ತದೆ. ಏನೋ ಡಿಫರೆಂಟ್ ಆಗಿರುತ್ತದೆ ಎಂಬ ನಂಬಿಕೆಯಿರುತ್ತದೆ. ವಿಶೇಷವಾಗಿ ಯಂಗ್ ಅಡಿಯನ್ಸ್ ಅವರ ಸಿನಿಮಾಗೆ ಹೆಚ್ಚಾಗಿ ಬರುತ್ತಾರೆ.
ಇದೀಗ ಬಿಡುಗಡೆಯಾಗಿರುವ ಸಪ್ತಸಾಗರದಾಚೆ ಎಲ್ಲೊ ಸಿನಿಮಾವೂ ಯುವ ಜನರನ್ನು ಸೆಳೆಯುತ್ತಿದೆ. ಭಾವನಾತ್ಮಕ ಪ್ರೇಮಕತೆಯಿರುವ ಸಿನಿಮಾ ಸಪ್ತಸಾಗರದಾಚೆ ಎಲ್ಲೊ ವೀಕೆಂಡ್ ನಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದಿದೆ.
ಮೊನ್ನೆ ಬಿಡುಗಡೆಯಾಗಿರುವ ಸಿನಿಮಾ ಎರಡು ದಿನದಲ್ಲಿ 5 ಕೋಟಿ ರೂ.ಗಳಷ್ಟು ಗಳಿಕೆ ಮಾಡಿದೆ. ಮೊದಲ ದಿನದ ಗಳಿಕೆ 2 ಕೋಟಿ ರೂ.ಗಳ ಸನಿಹ ಬಂದಿತ್ತು. ತೆಲುಗಿನ ಖುಷಿ ಸಿನಿಮಾ, ತಮಿಳಿನ ಜೈಲರ್ ಸಿನಿಮಾದ ಅಬ್ಬರದ ನಡುವೆಯೂ ಕನ್ನಡ ಸಿನಿಮಾ ಗೆದ್ದಿದೆ.