ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಇಂದು 52 ನೇ ವರ್ಷದ ಜನ್ಮದಿನ ಆಚರಿಸಿಕೊಳ್ಳುತ್ತಿದ್ದು, ಅವರ ಜನ್ಮದಿನ ಪ್ರಯುಕ್ತ ಕಿಚ್ಚ46 ಟೈಟಲ್ ರಿವೀಲ್ ಆಗಿದೆ.
ನಿನ್ನೆ ಮಧ‍್ಯರಾತ್ರಿ ಟೈಟಲ್ ಘೋಷಣೆಯಾಗಿದ್ದು, ಈ ಸಿನಿಮಾಗೆ ಮ್ಯಾಕ್ಸ್ ಎಂದು ಹೆಸರಿಡಲಾಗಿದೆ. ಈ ಬಾರಿ ಸುದೀಪ್ ಸಂಪೂರ್ಣವಾಗಿ ತಮ್ಮ ಹುಟ್ಟುಹಬ್ಬವನ್ನು ಅಭಿಮಾನಿಗಳೊಂದಿಗೆ ಆಚರಿಸಿಕೊಳ್ಳುತ್ತಿದ್ದಾರೆ.
ನಿನ್ನೆ ಮಧ‍್ಯರಾತ್ರಿಯಿಂದಲೇ ಅಭಿಮಾನಿಗಳ ಸಂಭ್ರಮ ಶುರುವಾಗಿದೆ. ಇಂದು ಅಭಿಮಾನಿಗಳು ಕಿಚ್ಚನ ಹೆಸರಿನಲ್ಲಿ ಅನ್ನದಾನ, ರಕ್ತದಾನ ಮುಂತಾದ ಸಾಮಾಜಿಕ ಕಾರ್ಯಗಳನ್ನೂ ಹಮ್ಮಿಕೊಂಡಿದ್ದಾರೆ. ನಂದಿ ಲಿಂಕ್ಸ್ ಗ್ರೌಂಡ್ಸ್ ನಲ್ಲಿ ಕಿಚ್ಚೋತ್ಸವ ನಡೆಯಲಿದ್ದು, ಸುದೀಪ್ ಅಭಿಮಾನಿಗಳನ್ನು ಭೇಟಿ ಮಾಡುತ್ತಿದ್ದಾರೆ.