ಹೈದರಾಬಾದ್: ಕಾಂತಾರ ಸಿನಿಮಾ ಮೂಲಕ ಮನೆ ಮಾತಾಗಿದ್ದ ನಟಿ ಸಪ್ತಮಿ ಗೌಡ ಈಗ ತೆಲುಗು ಸಿನಿಮಾದಲ್ಲಿ ಅವಕಾಶ ಪಡೆದಿದ್ದಾರೆ.
ಕಾಂತಾರ ಬಳಿಕ ಸಪ್ತಮಿ ಬಾಲಿವುಡ್ ನಲ್ಲಿ ಕಾಶ‍್ಮೀರ್ ಫೈಲ್ಸ್ ಖ್ಯಾತಿಯ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರ ದಿ ವ್ಯಾಕ್ಸಿನ್ ವಾರ್ ಸಿನಿಮಾದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಈ ಸಿನಿಮಾ ಇನ್ನೂ ಬಿಡುಗಡೆಯಾಗಬೇಕಿದೆ.
ಇದರ ಬೆನ್ನಲ್ಲೇ ಸಪ್ತಮಿ ಈಗ ತೆಲುಗಿನಲ್ಲಿ ತಮ್ಮುಡು ಸಿನಿಮಾದಲ್ಲಿ ನಟ ನಿತಿನ್ ಗೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ವೇಣು ಶ್ರೀರಾಮ್ ನಿರ್ದೇಶನದ ಸಿನಿಮಾಗೆ ಖ್ಯಾತ ನಿರ್ಮಾಪಕ ದಿಲ್ ರಾಜು ಬಂಡವಾಳ ಹೂಡುತ್ತಿದ್ದಾರೆ.