Select Your Language

Notifications

webdunia
webdunia
webdunia
webdunia

ರಿಷಬ್ ಶೆಟ್ಟಿ, ರಾಕಿಂಗ್ ಸ್ಟಾರ್ ಯಶ್ ಮಕ್ಕಳ ರಾಖಿ ಹಬ್ಬದ ಸಂಭ್ರಮ

ರಿಷಬ್ ಶೆಟ್ಟಿ, ರಾಕಿಂಗ್ ಸ್ಟಾರ್ ಯಶ್ ಮಕ್ಕಳ ರಾಖಿ ಹಬ್ಬದ ಸಂಭ್ರಮ
ಬೆಂಗಳೂರು , ಬುಧವಾರ, 30 ಆಗಸ್ಟ್ 2023 (18:01 IST)
Photo Courtesy: Twitter
ಬೆಂಗಳೂರು: ಅಣ್ಣ-ತಂಗಿಯರ ಸಂಬಂಧ ಸಾರುವ ರಾಖಿ ಹಬ್ಬವನ್ನು ಇಂದು ಎಲ್ಲೆಡೆ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಸ್ಯಾಂಡಲ್ ವುಡ್ ತಾರೆಯರಾದ ರಾಧಿಕಾ ಪಂಡಿತ್ ಮತ್ತು ರಿಷಬ್ ಶೆಟ್ಟಿ ಪತ್ನಿ ಪ್ರಗತಿ ಶೆಟ್ಟಿ ತಮ್ಮ ಮಕ್ಕಳ ರಾಖಿ ಹಬ್ಬದ ಸಂಭ್ರಮದ ಕ್ಷಣಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ರಾಧಿಕಾ ಪಂಡಿತ್ ಪ್ರತೀ ವರ್ಷವೂ ತಮ್ಮಿಬ್ಬರು ಮಕ್ಕಳ ರಾಖಿ ಹಬ್ಬದ ಸಂಭ್ರಮವನ್ನು ಹಂಚಿಕೊಳ್ಳುತ್ತಾರೆ. ಈ ಬಾರಿಯೂ ಐರಾ ತಮ್ಮ ಯಥರ್ವ್ ಗೆ ಆರತಿ ಎತ್ತಿ ಸಿಹಿ ತಿನಿಸುವ ಕ್ಯೂಟ್ ಕ್ಷಣವನ್ನು ರಾಧಿಕಾ ಹಂಚಿಕೊಂಡಿದ್ದಾರೆ.

ಕಾಂತಾರ ಸ್ಟಾರ್ ರಿಷಬ್ ಶೆಟ್ಟಿ ಪತ್ನಿ ಪ್ರಗತಿ ಕೂಡಾ ಮಕ್ಕಳ ರಾಖಿ ಹಬ್ಬದ ಸಡಗರದ ಫೋಟೋ ಹಂಚಿಕೊಂಡಿದ್ದಾರೆ. ರನ್ವಿತ್ ಶೆಟ್ಟಿಗೆ ಮುದ್ದು ತಂಗಿ ಒಂದು ವರ್ಷದ ಪುಟಾಣಿ ರಾದ್ಯಾ ಶೆಟ್ಟಿ ತಿಲಕವಿಟ್ಟು ರಾಖಿ ಕಟ್ಟಿದ ಸುಂದರ ಕ್ಷಣವನ್ನು ಪ್ರಗತಿ ಹಂಚಿಕೊಂಡಿದ್ದಾರೆ.  ಈ ಎರಡೂ ಸ್ಟಾರ್ ಮಕ್ಕಳ ಕ್ಯೂಟ್ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸರ್ಕಾರಿ ಭೂಮಿ ಒತ್ತುವರಿ ಆರೋಪ: ನಟ ಪ್ರಕಾಶ್ ರಾಜ್ ಗೆ ನೋಟಿಸ್