Select Your Language

Notifications

webdunia
webdunia
webdunia
webdunia

ಈ ಬಾರಿ ಅಭಿಮಾನಿಗಳ ಜೊತೆ ಕಿಚ್ಚ ಸುದೀಪ್ ಹುಟ್ಟುಹಬ್ಬ ಸೆಲೆಬ್ರೇಷನ್

ಈ ಬಾರಿ ಅಭಿಮಾನಿಗಳ ಜೊತೆ ಕಿಚ್ಚ ಸುದೀಪ್ ಹುಟ್ಟುಹಬ್ಬ ಸೆಲೆಬ್ರೇಷನ್
ಬೆಂಗಳೂರು , ಸೋಮವಾರ, 28 ಆಗಸ್ಟ್ 2023 (09:00 IST)
Photo Courtesy: Twitter
ಬೆಂಗಳೂರು: ಕೊರೋನಾ ಭಯ ದೂರವಾದ ಮೇಲೆ ಸ್ಯಾಂಡಲ್ ವುಡ್ ಸ್ಟಾರ್ ಗಳು ಒಬ್ಬರಾದ ಮೇಲೆ ಒಬ್ಬರಂತೆ ಈ ಬಾರಿ ಅಭಿಮಾನಿಗಳ ಜೊತೆ ಜೋರಾಗಿಯೇ ಹುಟ್ಟುಹಬ್ಬದ ಸಂಭ್ರಮಾಚರಣೆ ಮಾಡುತ್ತಿದ್ದಾರೆ.

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸೆಪ್ಟೆಂಬರ್ 2 ರಂದು ಹುಟ್ಟಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಅವರೂ ಈ ಬಾರಿ ಅಭಿಮಾನಿಗಳೊಂದಿಗೆ ಮಧ್ಯರಾತ್ರಿಯಿಂದಲೇ ಹುಟ್ಟುಹಬ್ಬದ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ‍್ಳಲಿದ್ದಾರೆ.

ರಿಷಬ್ ಶೆಟ್ಟಿ, ಡಾಲಿ ಧನಂಜಯ್ ರಂತೇ ಕಿಚ್ಚ ಸುದೀಪ್ ಕೂಡಾ ನಂದಿ ಲಿಂಕ್ಸ್ ಗ್ರೌಂಡ್ ನಲ್ಲಿ ಸೆಪ್ಟೆಂಬರ್ 1 ರಂದು ರಾತ್ರಿ 10 ಗಂಟೆಯಿಂದ 12 ಗಂಟೆಯವರೆಗೆ ಅಭಿಮಾನಿಗಳ ಜೊತೆ ಕಾಲ ಕಳೆಯಲಿದ್ದು, ಕೇಕ್ ಕತ್ತರಿಸಿ ಸಂಭ್ರಮಿಸಲಿದ್ದಾರೆ. ಅದಾದ ಬಳಿಕ ಮರುದಿನ ಜೆಪಿ ನಗರದ ನಿವಾಸದಲ್ಲಿ ಬೆಳಿಗ್ಗೆಯಿಂದಲೇ ಅಭಿಮಾನಿಗಳ ಶುಭಾಶಯ ಸ್ವೀಕರಿಸಲಿದ್ದಾರೆ ಎಂದು ತಿಳಿದುಬಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಉಪೇಂದ್ರ ಸಿನಿಮಾದ ಫಸ್ಟ್ ಲುಕ್ ಅನಾವರಣ