Select Your Language

Notifications

webdunia
webdunia
webdunia
webdunia

ಬಿಗ್ ಬಾಸ್ ಕನ್ನಡ: ಸಮೀರ್ ಆಚಾರ್ಯ ಮುಚ್ಚಿಟ್ಟಿದ್ದ ಸತ್ಯ ಬಹಿರಂಗಪಡಿಸಿದ ಚಂದನ್ ಶೆಟ್ಟಿ!

ಬಿಗ್ ಬಾಸ್ ಕನ್ನಡ: ಸಮೀರ್ ಆಚಾರ್ಯ ಮುಚ್ಚಿಟ್ಟಿದ್ದ ಸತ್ಯ ಬಹಿರಂಗಪಡಿಸಿದ ಚಂದನ್ ಶೆಟ್ಟಿ!
ಬೆಂಗಳೂರು , ಗುರುವಾರ, 4 ಜನವರಿ 2018 (09:57 IST)
ಬೆಂಗಳೂರು: ಬಿಗ್ ಬಾಸ್ ಮನೆಯೊಳಗೆ ಸೀಕ್ರೆಟ್ ರೂಂನೊಳಗಿದ್ದ ಸಮೀರ್ ಆಚಾರ್ಯ ಮತ್ತೆ ಮನೆಯೊಳಗೆ ಬರುವಾಗ ತಾವು ಜಯ ಶ್ರೀನಿವಾಸನ್ ಜತೆ ಇದ್ದ ಸತ್ಯ ಯಾವುದೇ ಕಾರಣಕ್ಕೂ ಬಾಯಿಬಿಡಬಾರದೆಂದು ಬಿಗ್ ಬಾಸ್ ಆದೇಶಿಸಿತ್ತು.
 

ಆದರೆ ಸಮೀರ್ ಸ್ವತಃ ಬಾಯಿಬಿಡದಿದ್ದರೂ, ಅವರ ಬ್ಯಾಗ್ ಒಳಗಿದ್ದ ಒಂದು ವಸ್ತುವಿನಿಂದ ಚಂದನ್ ಶೆಟ್ಟಿ ಅವರು ಬಚ್ಚಿಟ್ಟಿದ್ದ ರಹಸ್ಯವನ್ನು ನಿವೇದಿತಾ ಮತ್ತು ಕೃಷಿ ತಾಪಂಡ ಎದುರು ಬಾಯಿಬಿಟ್ಟಿದ್ದಾರೆ.

ಬೆಳ್ಳಂ ಬೆಳಿಗ್ಗೆ ಜಯ ಶ್ರೀನಿವಾಸನ್ ಎಲಿಮಿನೇಟೆಡ್ ಎಂಬ ನಾಮಫಲಕ ನೋಡಿದ ಚಂದನ್ ಶೆಟ್ಟಿ ಮತ್ತು ಮನೆಯವರು ಗಾರ್ಡನ್ ಏರಿಯಾದಲ್ಲಿ ಕುಳಿತುಕೊಂಡು ಇದರ ಬಗ್ಗೆ ಚರ್ಚೆ ನಡೆಸುತ್ತಿದ್ದರು. ಆಗಲೇ ಚಂದನ್ ಹಾಗಿದ್ದರೆ ಸಮೀರ್ ಮತ್ತು ಜಯ ಶ್ರೀನಿವಾಸನ್ ಅವರು ಸೀಕ್ರೆಟ್ ರೂಂನಲ್ಲಿದ್ದರು ಎಂದು ಊಹಿಸಿದರು.

ಅಷ್ಟೇ ಅಲ್ಲದೆ, ಇದಕ್ಕೆ ಕಾರಣವನ್ನೂ ಕೊಟ್ಟ ಚಂದನ್ ಸಮೀರ್ ಬ್ಯಾಗ್ ಒಳಗೆ ಜಯಶ್ರೀನಿವಾಸನ್ ಕನ್ನಡಕ ಇತ್ತು. ಅದು ಹೇಗೆ ಬಂತು? ಅದನ್ನು ನಾನು ನೋಡಿದ ತಕ್ಷಣ ಸಮೀರ್ ಮುಖಭಾವವೇ ಬದಲಾಯ್ತು. ಹೀಗಾಗಿಯೇ ಅವರಿಬ್ಬರೂ ಒಂದೇ ರೂಂನಲ್ಲಿದ್ದರು ಅನ್ನುವುದು ಪಕ್ಕಾ ಎಂದರು.  ಆದರೆ ಕೊನೆಗೆ ಚಂದನ್ ದಿವಾಕರ್ ಎಲಿಮಿನೇಟೆಡ್ ಎಂಬ ಫೋಟೋ ಅಳುತ್ತಾ ಕೂತರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕಿಚ್ಚ ಸುದೀಪ್ ಗೆ ಸದ್ಯದಲ್ಲೇ ಗಂಡು ಮಗುವಾಗುತ್ತಂತೆ?!!