Publish Date: Mon, 01 Jan 2018 (09:39 IST)
Updated Date: Mon, 01 Jan 2018 (09:44 IST)
ಬೆಂಗಳೂರು : ಬಿಗ್ ಬಾಸ್ ಮನೆಗೆ ಸೆಲೆಬ್ರಿಟಿ ಕಡೆಯಿಂದ ಬಂದಿರುವ ಚಂದನ್ ಶೆಟ್ಟಿ ಅವರು ಬಿಗ್ ಬಾಸ್ ನಲ್ಲಿ ಒಳ್ಳೆಯ ಪ್ರತಿಸ್ಪರ್ಧಿಯಾಗಿದ್ದು, ಕೈಗೆ ಸಿಕ್ಕಿದ ವಸ್ತುಗಳನ್ನು ಹಿಡಿದು ಸಂಗೀತ ಸಂಯೋಜನೆ ಮಾಡಿ ಸಾಂಗ್ ಗಳನ್ನು ಹಾಡುವ ಅವರ ಕಲೆಗೆ ಮನೆಯ ಒಳಗೆ ಹಾಗು ಹೊರಗಿನ ಜನತೆ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ.
ಚಂದನ್ ಶೆಟ್ಟಿ ಅವರು ಬಿಗ್ ಬಾಸ್ ಮನೆಯ ಒಳಗೆ ಇರುವಾಗಲೇ ಅವರಿಗೆ ಒಂದು ಬಿಗ್ ಆಫರ್ ಬಂದಿದೆ. ಅದೇನೆಂದರೆ ಹಾಡು ಹಾಡಲೂ ಅಥವಾ ಬರೆಯಲೂ ಅಲ್ಲ ಬದಲಾಗಿ ನಾಯಕನಟನಾಗಿ ಅಭಿನಯಿಸಲು. ಇವರು ಮನೆಯಿಂದ ಹೊರಗೆ ಬಂದ ತಕ್ಷಣವೇ ಹೀರೊ ಆಗಿ ಜನರ ಮುಂದೆ ಬರಲಿದ್ದಾರೆ.
ಇವರ ಅಭಿನಯದ ಈ ಚಿತ್ರಕ್ಕೆ ‘ಸಂಗಮ’, ‘ಜೈಭಜರಂಗಬಲಿ’ ಚಿತ್ರಗಳನ್ನು ನಿರ್ದೇಶಿಸಿದ ರವಿವರ್ಮ ಗುಬ್ಬಿ ಅವರು ಆಕ್ಷನ್ ಕಟ್ ಹೇಳಲಿದ್ದಾರೆ. ಈಗಾಗಲೇ ಚಿತ್ರಕ್ಕೆ ಸ್ಕ್ರೀನ್ ಪ್ಲೆ ಬರೆದಿರುವ ನಿರ್ದೇಶಕರು ಚಂದನ್ ಅವರು ಬಿಗ್ ಬಾಸ್ ಮನೆಯಿಂದ ಹೊರಗೆ ಬಂದ ತಕ್ಷಣವೇ ಚಿತ್ರಕ್ಕೆ ಚಾಲನೆ ನೀಡಲಿದ್ದಾರೆ ಎಂದು ತಿಳಿದು ಬಂದಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ