Publish Date: Thu, 28 Dec 2017 (09:24 IST)
Updated Date: Thu, 28 Dec 2017 (09:28 IST)
ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಬಿಗ್ ಬಾಸ್ ದಿನಕ್ಕೊಂದು ಟ್ವಿಸ್ಟ್ ಗಳನ್ನು ಕೊಡುತ್ತಿದ್ದು ಈಗ ಸಮೀರ್ ಆಚಾರ್ಯ ಅವರನ್ನು ಮನೆಯಿಂದ ಹೊರ ಕಳುಹಿಸಿದ್ದಾರೆ.
ಶ್ರುತಿ, ಸಮೀರ್ ಆಚಾರ್ಯ, ದಿವಾಕರ್ ಮೂವರಲ್ಲಿ ಸಮೀರ್ ಆಚಾರ್ಯ ಅವರನ್ನು ಬಿಗ್ ಬಾಸ್ ಮನೆಯಿಂದ ಹೊರಹಾಕಿ ಸ್ಪರ್ಧಿಗಳಲ್ಲಿ ಆಶ್ಚರ್ಯ, ಆತಂಕ ಮನೆಮಾಡುವಂತೆ ಮಾಡಿದ್ದಾರೆ. ಸಮೀರ್ ಆಚಾರ್ಯ ಅವರು ದಿಢೀರನೆ ಮನೆಯಿಂದ ಹೋಗಿದ್ದಕ್ಕೆ ರಿಯಾಜ್ ಹಾಗು ಚಂದನ್ ಅವರು ಅತ್ತು, ಎಲ್ಲರಿಗೂ ಹೇಳಿ ಹೋಗುವ ಅವಕಾಶ ಬಿಗ್ ಬಾಸ್ ನೀಡಬೇಕಿತ್ತು ಎಂದು ತಮ್ಮ ದುಃಖವನ್ನು ವ್ಯಕ್ತಪಡಿಸಿದ್ದಾರೆ.
ಆದರೆ ಮನೆಯಿಂದ ಹೊರಗೆ ಬಂದ ಸಮೀರ್ ಆಚಾರ್ಯ ಅವರನ್ನು ಬಿಗ್ ಬಾಸ್ ಸೀಕ್ರೆಟ್ ರೂಂಗೆ ಕಳುಹಿಸಿದ್ದಾರೆ. ಹಿಂದಿನ ದಿನ ಸೀಕ್ರೆಟ್ ರೂಂಗೆ ಬಂದಿದ್ದ ಜಯ್ ಶ್ರೀನಿವಾಸನ್ ಅವರ ಜೊತೆ ಸೇರಿ ಮನೆಯೊಳಗಿರುವ ಸದಸ್ಯರ ನಡೆನುಡಿಗಳನ್ನು ವೀಕ್ಷಿಸುತ್ತಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ