Daily Horoscope

Select Your Language

Notifications

webdunia
webdunia
webdunia
webdunia

ಪುಟ್ಟಗೌರಿ ರಂಜಿನಿ ಕಾಲೆಳೆದ ಕಿಚ್ಚ ಸುದೀಪ್

ಪುಟ್ಟಗೌರಿ ಧಾರವಾಹಿ
ಬೆಂಗಳೂರು: ಭಾನುವಾರ ಬಂತೆಂದರೆ ಕಿಚ್ಚ ಸುದೀಪ್ ಕಲರ್ಸ್ ಸೂಪರ್ ವಾಹಿನಿಯ ಬಿಗ್ ಬಾಸ್ ಕಾರ್ಯಕ್ರದಲ್ಲಿ ಸೆಲೆಬ್ರಿಟಿಗಳ ಜತೆ ಅಡುಗೆ ಮಾಡ್ತಾರೆ. ಅದೇ ರೀತಿ ಈ ವಾರ ಪುಟ್ಟಗೌರಿ ಧಾರವಾಹಿಯ ರಂಜಿನಿ ಮತ್ತು ನಾಗಕನ್ನಿಕೆ ಧಾರವಾಹಿಯ ಅದಿತಿ ಜತೆ ಕಿಚನ್ ಟೈಮ್ ಏರ್ಪಡಿಸಿದ್ದರು.
 

ಈ ಸಂದರ್ಭದಲ್ಲಿ ಕಿಚ್ಚ ಸುದೀಪ್ ಪುಟ್ಟಗೌರಿ ಧಾರವಾಹಿಯಲ್ಲಿ ಹುಲಿ ಅಟ್ಟಿಸಿಕೊಂಡು ಬಂದ ಕತೆ ಹೇಳಿ ಪುಟ್ಟಗೌರಿ ಕಾಲೆಳೆದರು.  ಪುಟ್ಟಗೌರಿ ಧಾರವಾಹಿಯಲ್ಲಿ ಕೆಲವು ತಿಂಗಳುಗಳ ಹಿಂದೆ ಪುಟ್ಟಗೌರಿ ಬೆಟ್ಟದಿಂದ ಬಿದ್ದರೂ ಕೂದಲೂ ಕೊಂಕದೇ ಬದುಕುಳಿಯುವುದು, ನಂತರ ಹುಲಿ ಜತೆ ಸೆಣಸುವ ದೃಶ್ಯಗಳಿತ್ತು. ಇದು ಭಾರೀ ಟ್ರೋಲ್ ಗಳೊಗಾಗಿತ್ತು.

ಈ ಬಗ್ಗೆ ಕಿಚ್ಚ ಸುದೀಪ್ ಕೂಡಾ ಪುಟ್ಟಗೌರಿ ಪಾತ್ರಧಾರಿ ರಂಜಿನಿಯನ್ನು ಕೇಳಿ ತಮಾಷೆ ಮಾಡಿದರು. ಅದು ಹೇಗೆ ಹುಲಿಗಿಂತ ಫಾಸ್ಟ್ ಆಗಿ ಓಡಿದ್ರಿ? ಹುಲಿ ಅಟ್ಟಿಸಿಕೊಂಡು ಬರುವಾಗ ಅಷ್ಟು ಫಾಸ್ಟಾಗಿ ಓಡೋದು ಅಲ್ಲದೇ ಸೀರೆ ಉಟ್ಟುಕೊಂಡೇ ಮರ ಹತ್ತಿದ್ದು ಹೇಗೆ? ಹುಲಿ ನಿಮಗೆ ಏನೂ ಮಾಡದೇ ಹೋಗಿದ್ದು ಹೇಗೆ ಎಂದು ಕಾಲೆಳೆದರು. ಕೊನೆಗೆ ಪುಟ್ಟಗೌರಿ ಕೈಯಲ್ಲಿ ಒಂದು ಹಾಡು ಹಾಡಿಸುತ್ತಾ ಅಡುಗೆ ಮಾಡಿದರು ಕಿಚ್ಚ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಬಿಗ್ ಬಾಸ್: ನಿಜಕ್ಕೂ ಅಭಿಮಾನಿಗಳಿಗೆ ದಿವಾಕರ್ ಅವಮಾನ ಮಾಡಿದ್ದು ನಿಜವಾ?!