ಬೆಂಗಳೂರು: ಸಾಮಾನ್ಯ ಜನರಾಗಿ ಮನೆ ಪ್ರವೇಶಿಸಿದ ದಿವಾಕರ್ ಇದೀಗ ಸೀಕ್ರೆಟ್ ರೂಂನಲ್ಲಿರುವುದು ಅಭಿಮಾನಿಗಳಿಗೆ ಫುಲ್ ಖುಷಿ ನೀಡಿದೆ. ಮನೆಯೊಳಗೆ ದಿವಾಕರ್ ಎಲಿಮಿನೇಟ್ ಆಗಿದ್ದಾರೆಂಬ ನಂಬಿಕೆಯಲ್ಲಿ ಮನೆಯೊಳಗಿನ ಸದಸ್ಯರು ಅವರ ಬಗ್ಗೆ ತಮ್ಮ ಮನದ ಮಾತುಗಳನ್ನು ಹೇಳಿಕೊಳ್ಳುತ್ತಿದ್ದಾರೆ.
ಇದನ್ನೆಲ್ಲಾ ಸೀಕ್ರೆಟ್ ರೂಂನಲ್ಲಿ ಕುಳಿತು ದಿವಾಕರ್ ಕೇಳಿಸಿಕೊಳ್ಳುತ್ತಿದ್ದಾರೆ. ಹಿಂದೊಮ್ಮೆ ಕಿಚ್ಚ ಸುದೀಪ್ ಜತೆ ಸಂವಾದ ನಡೆಸುವಾಗ ದಿವಾಕರ್ ವೋಟ್ ಮಾಡುವ ಜನರ ಬಗ್ಗೆ ಹಗುರವಾಗಿ ಮಾತನಾಡಿದ್ದೇ ಅವರಿಗೆ ಮುಳುವಾಯಿತು ಎಂದು ಅನುಪಮಾ ಜೆಕೆ ಬಳಿ ಹೇಳಿಕೊಳ್ಳುತ್ತಿದ್ದರೆ ದಿವಾಕರ್ ಮೌನವಾಗಿ ನೋಡುತ್ತಿದ್ದಾರೆ.
ಇದರ ಬಗ್ಗೆ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ್ದಾರೆ. ದಿವಾಕರ್ ಪ್ರತೀ ಬಾರಿ ನಾಮಿನೇಷನ್ ನಿಂದ ಪಾರಾದ ನೆಲಕ್ಕೆ ಬಾಗಿ ವೋಟ್ ಮಾಡಿದ ಜನತೆಗೆ ನಮಸ್ಕಾರ ಮಾಡುತ್ತಾರೆ. ಅದೇ ಅವರ ನಡತೆಯನ್ನು ತೋರಿಸುತ್ತದೆ. ನೀವೆಲ್ಲಾ ಹೇಳಿದ ಹಾಗೆ ಅವರೇನು ಜನರಿಗೆ ಅವಮಾನ ಮಾಡಿಲ್ಲ ಎಂದು ಅಭಿಮಾನಿಗಳೇ ದಿವಾಕರ್ ರನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ