Select Your Language

Notifications

webdunia
webdunia
webdunia
webdunia

ಬಿಗ್ ಬಾಸ್ ಕನ್ನಡ: ಆತ್ಮಹತ್ಯೆಗೆ ಪ್ರಯತ್ನಿಸಿದ್ದ ಅನುಪಮಾ ಗೌಡ! ಗೊಂಬೆ ನೇಹಾ ಕಾಪಾಡಿದ್ರಂತೆ!

ಬಿಗ್ ಬಾಸ್ ಕನ್ನಡ: ಆತ್ಮಹತ್ಯೆಗೆ ಪ್ರಯತ್ನಿಸಿದ್ದ ಅನುಪಮಾ ಗೌಡ! ಗೊಂಬೆ ನೇಹಾ ಕಾಪಾಡಿದ್ರಂತೆ!
ಬೆಂಗಳೂರು , ಮಂಗಳವಾರ, 2 ಜನವರಿ 2018 (11:20 IST)
ಬೆಂಗಳೂರು: ಅಕ್ಕ ಧಾರವಾಹಿ ಮೂಲಕ ಮನೆ ಮಾತಾಗಿ ಸದ್ಯಕ್ಕೆ ಬಿಗ್ ಬಾಸ್ ಸ್ಪರ್ಧಿಯಾಗಿರುವ ಅನುಪಮಾ ಗೌಡ ಒಂದೂವರೆ ವರ್ಷದ ಹಿಂದೆ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದರಂತೆ!
 

ಇದನ್ನು ಅವರು ಬಿಗ್ ಬಾಸ್ ನೀಡಿದ ರಹಸ್ಯವೊಂದನ್ನು ಬಹಿರಂಗಪಡಿಸುವ ಚಟುವಟಿಕೆಯಲ್ಲಿ ಹೇಳಿಕೊಂಡಿದ್ದಾರೆ. ಬಿಗ್ ಬಾಸ್ ಕ್ಯಾಮರಾ ಮುಂದೆ ನಿಂತ ಅನುಪಮಾ ‘ಒಂದೂವರೆ ವರ್ಷದ ಹಿಂದೆ ಜೀವನವೇ ಬೇಡ ಎನಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಟ್ಯಾಬ್ಲೆಟ್ಸ್ ತೆಗೆದುಕೊಂಡಿದ್ದೆ. ಆದರೆ ನೇಹಾ (ಲಕ್ಷ್ಮೀ ಬಾರಮ್ಮ ಧಾರವಾಹಿಯ ಗೊಂಬೆ) ನನ್ನ ಕಾಪಾಡಿದಳು.

ಆವತ್ತು ಇಡೀ ದಿನ ನನ್ನ ಜತೆ ಇದ್ದು ನೋಡಿಕೊಂಡಳು. ಅವಳೇ ನನಗೆ ನಮ್ಮನ್ನು ನಾವು ಪ್ರೀತಿಸಲು ಕಲಿಯಬೇಕು ಎಂದು ಹೇಳಿಕೊಟ್ಟಳು. ಅದಾದ  ಮೇಲೆ ನಾನು ಹಾಗೆಯೇ ಬದುಕುತ್ತಿದ್ದೇನೆ’ ಎಂದು ಅನುಪಮಾ ರಹಸ್ಯ ಬಾಯ್ಬಿಟ್ಟಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಹೊಸ ವರ್ಷದ ಆಚರಣೆಗೆ ಸುದೀಪ್ ಅಭಿಮಾನಿಗಳು ಮಾಡಿದ ಕೆಲಸವೇನು ಗೊತ್ತಾ...?