Publish Date: Fri, 27 Dec 2019 (08:50 IST)
Updated Date: Fri, 27 Dec 2019 (08:52 IST)
ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಜೋಕರ್ ವೇಷ ಹಾಕಿ ಮನೆಯವರಿಗೆಲ್ಲಾ ಬಿಗ್ ಶಾಕ್ ಕೊಟ್ಟಿದ್ದ ಕಿಚ್ಚ ಸುದೀಪ್ ಈ ವೇಷ ಹಾಕಲು ಎಷ್ಟು ಶ್ರಮವಹಿಸಿದ್ದರು ಗೊತ್ತಾ?
ಬಿಗ್ ಬಾಸ್ ವೀಕ್ಷಕರಿಗೆ ಮನರಂಜನೆ ಕೊಡಲು ತಮ್ಮ ಸ್ಟಾರ್ ಗಿರಿಯನ್ನೂ ಪಕ್ಕಕ್ಕಿಟ್ಟು ಜೋಕರ್ ವೇಷ ಹಾಕಿ ಮನೆಯೊಳಗೆ ಪ್ರವೇಶಿಸದ ಕಿಚ್ಚನನ್ನು ಯಾರೂ ಗುರುತಿಸಲು ಸಾಧ್ಯವಾಗಿರಲಿಲ್ಲ. ಅಷ್ಟು ಚೆನ್ನಾಗಿ ಮೇಕಪ್ ಮಾಡಿಕೊಳ್ಳಲು ಕಿಚ್ಚ ಎಷ್ಟು ಹೊತ್ತು ತೆಗೆದುಕೊಂಡರು ಗೊತ್ತೇ?
ಮೂಲಗಳ ಪ್ರಕಾರ ಸುಮಾರು ಎರಡು ಗಂಟೆಗಳ ಕಾಲ ಮೇಕಪ್ ರೂಂನಲ್ಲಿ ಜೋಕರ್ ಮೇಕ್ ಓವರ್ ಗಾಗಿ ಕುಳಿತಿದ್ದರಂತೆ ಕಿಚ್ಚ. ಮುಖಕ್ಕೆ ಬಣ್ಣ ಬಳಿದುಕೊಂಡು ಪಕ್ಕಾ ಗುರುತೇ ಸಿಗದಂತೆ ವೇಷ ಧರಿಸಿ ಮನೆ ಮಂದಿಯನ್ನೂ ಯಾಮಾರಿಸಿದ್ದರು ಕಿಚ್ಚ.