ಬೆಂಗಳೂರು: ಹಿರೆತೆರೆಯಿಂದ ಕಿರುತೆರೆಗೆ ಬಂದು ಸೆನ್ಸೇಷನ್ ಸೃಷ್ಟಿಸಿದ್ದ ನಟ ಅನಿರುದ್ಧ್ ಜತ್ಕಾರ್ ಜೊತೆ ಜೊತೆಯಲಿ ಧಾರವಾಹಿಯಿಂದ ಹೊರಬರುತ್ತಿದ್ದಾರೆ ಎಂಬ ಸುದ್ದಿ ವೈರಲ್ ಆಗಿತ್ತು.
ಧಾರವಾಹಿ ತಂಡದಲ್ಲಿ ಕಿರಿಕ್ ಆಗಿದೆ. ಈ ಕಾರಣಕ್ಕೆ ಅನಿರುದ್ಧ್ ಧಾರವಾಹಿಯಿಂದ ಹೊರಬರಲಿದ್ದಾರೆ ಎಂಬ ಸುದ್ದಿ ಕೇಳಿಬಂದಿತ್ತು. ಇದರ ಬೆನ್ನಲ್ಲೇ ಫ್ಯಾನ್ಸ್ ಗೆ ಆತಂಕವಾಗಿದ್ದು, ಅನಿರುದ್ಧ್ ಇಲ್ಲದೇ ಶೋ ನೋಡಲ್ಲ ಎಂದೂ ಹಠ ಹಿಡಿದಿದ್ದಾರೆ.
ಜೊತೆ ಜೊತೆಯಲಿ ಧಾರವಾಹಿಗೆ ಆರ್ಯವರ್ಧನ್ ಪಾತ್ರಧಾರಿ ನಟ ಅನಿರುದ್ಧ್ ಅವರೇ ಜೀವಾಳ. ಅವರಿಲ್ಲದೇ ಧಾರವಾಹಿಯನ್ನು ಊಹಿಸಿಕೊಳ್ಳಲೂ ಸಾಧ‍್ಯವಿಲ್ಲ ಎನ್ನುವುದು ಪ್ರೇಕ್ಷಕರ ಮನದಾಳದ ಮಾತು. ಈ ನಡುವೆ ಕಿರಿಕ್ ನಡೆದಿರುವ ಸುದ್ದಿ ಫ್ಯಾನ್ಸ್ ಗೆ ಆಘಾತ ತಂದಿದೆ.