Publish Date: Fri, 19 Aug 2022 (17:07 IST)
Updated Date: Fri, 19 Aug 2022 (17:09 IST)
ಬೆಂಗಳೂರು: ಡಾ.ರಾಜ್ ಮೊಮ್ಮಗ ಧೀರೇನ್ ರಾಮ್ ಕುಮಾರ್ ಅಭಿನಯದ ಶಿವ 143 ಸಿನಿಮಾ ತೆರೆಗೆ ಬರಲು ರೆಡಿಯಾಗಿದೆ.
ಈ ಸಿನಿಮಾ ಆಗಸ್ಟ್ 26 ರಂದು ರಿಲೀಸ್ ಆಗುತ್ತಿದ್ದು, ಚಿತ್ರದ ಪ್ರಚಾರ ಕಾರ್ಯದಲ್ಲಿ ಧೀರೇನ್ ತೊಡಗಿಸಿಕೊಂಡಿದ್ದಾರೆ. ಅವರಿಗೆ ಇಡೀ ದೊಡ್ಮನೆ ಸಾಥ್ ಕೊಟ್ಟಿದೆ.
ಇನ್ನೊಂದು ವಿಶೇಷವೆಂದರೆ ಸಿನಿಮಾ ಪ್ರಚಾರದ ನಡುವೆ ಧೀರೇನ್ ಪ್ರೀತಿಯ ಅಪ್ಪು ಮಾಮನ ಮರೆತಿಲ್ಲ. ಪುನೀತ್ ರಾಜ್ ಕುಮಾರ್ ಬೇರೆ ಬೇರೆ ಸಿನಿಮಾಗಳ ಫೋಟೋಗಳನ್ನು ಒಳಗೊಂಡ ವಿಶೇಷ ಜಾಕೆಟ್ ಒಂದನ್ನು ಹಾಕಿಕೊಂಡು ಸಿನಿಮಾ ಪ್ರಚಾರ ಮಾಡುತ್ತಿದ್ದಾರೆ. ಈ ಮೂಲಕ ಪುನೀತ್ ಆಶೀರ್ವಾದದೊಂದಿಗೆ ಸಿನಿಮಾ ಯಶಸ್ವಿಯಾಗಬಹುದು ಎಂಬ ವಿಶ್ವಾದಲ್ಲಿದ್ದಾರೆ.