ಬೆಂಗಳೂರು: ರಕ್ಷಿತ್ ಶೆಟ್ಟಿ ನಾಯಕರಾಗಿರುವ ಹೇಮಂತ್ ರಾವ್ ನಿರ್ದೇಶನದ ಸಪ್ತಸಾಗರದಾಚೆ ಎಲ್ಲೊ ಸಿನಿಮಾದ ಹೊಸ ಅಪ್ ಡೇಟ್ ಇಂದು ಸಿಗಲಿದೆ.
ರಕ್ಷಿತ್ ಗೆ ನಾಯಕಿಯಾಗಿ ಈ ಸಿನಿಮಾದಲ್ಲಿ ರುಕ್ಮಿಣಿ ವಸಂತ್ ನಟಿಸುತ್ತಿದ್ದಾರೆ. ರುಕ್ಮಿಣಿ ಈ ಸಿನಿಮಾದಲ್ಲಿ ಸುರಭಿ ಎನ್ನುವ ಪಾತ್ರ ಮಾಡುತ್ತಿದ್ದಾರೆ.
ಇದೀಗ ಸುರಭಿ ಪಾತ್ರದ ಹೇಗಿರಲಿದೆ ಎಂಬ ಮೊದಲ ನೋಟ ಇಂದು ಪ್ರೇಕ್ಷಕರಿಗೆ ತಿಳಿಯಲಿದೆ. ಇಂದು ಚಿತ್ರ ತಂಡ ಹೀರೋಯಿನ್ ಫಸ್ಟ್ ಲುಕ್ ಬಿಡುಗಡೆ ಮಾಡಲಿದೆ.