Select Your Language

Notifications

webdunia
webdunia
webdunia
webdunia

ಗಾಳಿಪಟ 2 ಸಕ್ಸಸ್ ಪಾರ್ಟಿಯಲ್ಲಿ ಅನಂತ್ ನಾಗ್ ಮಾತಿಗೆ ಕಾಲಿಗೆ ಬಿದ್ದ ಗಣೇಶ್

ಗಾಳಿಪಟ 2 ಸಕ್ಸಸ್ ಪಾರ್ಟಿಯಲ್ಲಿ ಅನಂತ್ ನಾಗ್ ಮಾತಿಗೆ ಕಾಲಿಗೆ ಬಿದ್ದ ಗಣೇಶ್
ಬೆಂಗಳೂರು , ಗುರುವಾರ, 18 ಆಗಸ್ಟ್ 2022 (09:50 IST)
ಬೆಂಗಳೂರು: ಗಾಳಿಪಟ 2 ಚಿತ್ರ ಯಶಸ್ವಿಯಾದ ಹಿನ್ನಲೆಯಲ್ಲಿ ಯೋಗರಾಜ್ ಭಟ್ ಮತ್ತು ತಂಡ ನಿನ್ನೆ ಸಂಜೆ ಸಕ್ಸಸ್ ಮೀಟ್ ಆಯೋಜಿಸಿತ್ತು. ಈ ವೇಳೆ ಹಿರಿಯ ನಟ ಅನಂತ್ ನಾಗ್ ಸೇರಿದಂತೆ ಇಡೀ ಚಿತ್ರತಂಡ ವೇದಿಕೆಯಲ್ಲಿ ಚಿತ್ರದ ಬಗ್ಗೆ ಮಾತನಾಡಿದರು.

‘ಯಾಕೋ ನಂಗೆ ಗಣೇಶ್ ಜೊತೆ ನಟಿಸುವುದು ತುಂಬಾ ಸುಲಭವಾಗುತ್ತದೆ. ಅವರು ನೈಜ ಕಲಾವಿದ. ನನ್ನ ಮತ್ತು ಅವರ ನಡುವೆ ಉತ್ತಮ ಹೊಂದಾಣಿಕೆಯಿದೆ. ಇಷ್ಟು ಮಾಡಬೇಕೆಂದುಕೊಂಡು ಬಂದು ಗಣೇಶ್ ಮುಂದೆ ಇದ್ದರೆ ಅದು ಇನ್ನಷ್ಟು ಹೆಚ್ಚಾಗುತ್ತದೆ. ಗಣೇಶ್ ಜೊತೆ ನನಗೆ ಕೆಲಸ ಮಾಡಲು ತುಂಬಾ ಇಷ್ಟ’ ಎಂದು ಹೊಗಳಿದರು.

ಹಿರಿಯ ನಟ ವೇದಿಕೆ ಮೇಲೆ ತಮ್ಮನ್ನು ಹೊಗಳುವಾಗ ನೇರವಾಗಿ ವೇದಿಕೆಗೆ ಬಂದ ಗಣೇಶ್ ಅನಂತ್ ನಾಗ್ ಕಾಲಿಗೆ ಬಿದ್ದು ತಮ್ಮ ಧನ್ಯವಾದ ಸಲ್ಲಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಗಾಳಿಪಟ 2 ಯಶಸ್ಸಿನ ಬಳಿಕ ಅಭಿಮಾನಿಗಳಿಗೆ ಪತ್ರ ಬರೆದ ಗೋಲ್ಡನ್ ಸ್ಟಾರ್ ಗಣೇಶ್