Select Your Language

Notifications

webdunia
webdunia
webdunia
webdunia

ಗಾಳಿಪಟ 2 ಯಶಸ್ಸಿನ ಬಳಿಕ ಅಭಿಮಾನಿಗಳಿಗೆ ಪತ್ರ ಬರೆದ ಗೋಲ್ಡನ್ ಸ್ಟಾರ್ ಗಣೇಶ್

ಗಾಳಿಪಟ 2
ಬೆಂಗಳೂರು , ಗುರುವಾರ, 18 ಆಗಸ್ಟ್ 2022 (09:40 IST)
ಬೆಂಗಳೂರು: ಗಾಳಿಪಟ 2 ಸಿನಿಮಾ ಗೆದ್ದಿರುವುದು ಗೋಲ್ಡನ್ ಸ್ಟಾರ್ ಗಣೇಶ್ ಗೆ ಹೊಸ ಹುಮ್ಮಸ್ಸು ತಂದುಕೊಟ್ಟಿದೆ.

ಯೋಗರಾಜ್ ಭಟ್ ನಿರ್ದೇಶನದಲ್ಲಿ ಗಣೇಶ್ ಮಾಡಿರುವ ಎಲ್ಲಾ ಸಿನಿಮಾಗಳೂ ಸೂಪರ್ ಹಿಟ್ ಆಗಿವೆ. ಆ ಸಾಲಿಗೆ ಗಾಳಿಪಟ 2 ಕೂಡಾ ಸೇರಿಕೊಂಡಿದೆ. ಇದರ ಹಿನ್ನಲೆಯಲ್ಲಿ ಗಣೇಶ್ ಅಭಿಮಾನಿಗಳಿಗೆ ಪತ್ರ ಬರೆದು ಧನ್ಯವಾದ ಸಲ್ಲಿಸಿದ್ದಾರೆ.

ಸೋಲು ಗೆಲುವಿನ ಲೆಕ್ಕಾಚಾರದಲ್ಲಿ ನಿಮ್ಮ ತೀರ್ಪನ್ನು ಸಮಚಿತ್ತದಿಂದ ಎದುರಿಸಿದ್ದೇನೆ. ಇದಕ್ಕೆಲ್ಲಾ ನೀವು ನನ್ನ ಮೇಲಿಟ್ಟಿರುವ ಅಪಾರ ನಂಬಿಕೆಗೆ ನಾನು ಸಲ್ಲಿಸಬಹುದಾದ ಪುಟ್ಟ ಗೌರವ ಎಂದಷ್ಟೇ ನನ್ನ ಭಾವನೆ. ನಿಮ್ಮನ್ನು ಮನರಂಜಿಸುವ ಕಾಯಕ ನಿರಂತರವಾಗಿ ಸಾಗಲು ನಿಮ್ಮ ಪ್ರೀತಿ ಜೊತೆಗೆ ಅಕ್ಕರೆ ತುಂಬಿದ ಅಭಿಮಾನ ಜೊತೆಗಿದ್ದರೆ ಸಾಕು’ ಎಂದು ನಿರ್ದೇಶಕ ಯೋಗರಾಜ್ ಭಟ್, ನಿರ್ಮಾಪಕ ರಮೇಶ್ ರೆಡ್ಡಿ, ವಿತರಕರು, ಮಾಧ್ಯಮಗಳು, ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಿದ್ದಾರೆ ಗಣೇಶ್.

Share this Story:

Follow Webdunia kannada

ಮುಂದಿನ ಸುದ್ದಿ

ಶಿವಣ್ಣ-ಪ್ರಭುದೇವ ಸಿನಿಮಾಗೆ ನಾಯಕಿಯರು ಇವರೇ!