ಬರ್ಮಿಂಗ್ ಹ್ಯಾಮ್: ಕಾಮನ್ ವೆಲ್ತ್ ಗೇಮ್ಸ್ ನ ಪುರುಷರ 81 ಕೆ.ಜಿ. ವೈಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಭಾರತದ ಅಜಯ್ ಸಿಂಗ್ ಕೂದಲೆಳೆಯಲ್ಲಿ ಪದಕ ತಪ್ಪಿಸಿಕೊಂಡಿದ್ದಾರೆ.
ಒಟ್ಟು 319 ಕೆ.ಜಿ. ಭಾರ ಎತ್ತಿದ ಅಜಯ್ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ಕಂಚಿನ ಪದಕ ಗೆದ್ದ ಕೆನಡಾದ ಆಟಗಾರ 320 ಕೆ.ಜಿ. ಭಾರತ ಎತ್ತಿದ್ದರು. ಅಜಯ್ ಕೊನೆಯ ಸುತ್ತಿನಲ್ಲಿ ಜಾರಿ ಬಿದ್ದರು.
ಮೊದಲ ಎರಡು ಸುತ್ತಿನಲ್ಲಿ ಕ್ರಮವಾಗಿ 143 ಕೆ.ಜಿ. ಮತ್ತು 176 ಕೆ.ಜಿ. ಭಾರ ಎತ್ತಿದ್ದ ಅಜಯ್ ಕೊನೆಯ ಸುತ್ತಿನಲ್ಲಿ 180 ಕೆ.ಜಿ. ಭಾರ ಎತ್ತಲಾಗದೇ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು.