ಬರ್ಮಿಂಗ್ ಹ್ಯಾಮ್: ಕಾಮನ್ ವೆಲ್ತ್ ಗೇಮ್ಸ್ 2022 ರ ಲಾನ್ ಬಾಲ್ಸ್ ವಿಭಾಗದ ಸ್ಪರ್ಧೆಯಲ್ಲಿ ಭಾರತೀಯ ಮಹಿಳೆಯರ ತಂಡ ಫೈನಲ್ ತಲುಪಿ ಪದಕ ಖಾತ್ರಿಗೊಳಿಸಿದ್ದಾರೆ.
ನ್ಯೂಜಿಲೆಂಡ್ ವಿರುದ್ಧ ಅಂತರದಿಂದ ಗೆಲುವು ಸಾಧಿಸಿದ ಭಾರತೀಯ ವನಿತೆಯರು ಫೈನಲ್ ತಲುಪಿ ಐತಿಹಾಸಿಕ ಸಾಧನೆ ಮಾಡಿದರು. ಇದೀಗ ಫೈನಲ್ ನಲ್ಲಿ ಗೆದ್ದರೆ ಚಿನ್ನ ಸೋತರೆ ರಜತ ಪದಕ ಖಾತ್ರಿಯಾಗಿದೆ.
ಆರಂಭದಲ್ಲಿ 1-6 ಅಂತರದಿಂದ ಹಿನ್ನಡೆಯಲ್ಲಿದ್ದ ಭಾರತ ತಂಡ ಬಳಿಕ ಗೆಲುವು ಸಾಧಿಸಿದ್ದು ಅವಿಸ್ಮರಣೀಯವಾಗಿತ್ತು. ಗೆಲುವಿನ ಖುಷಿಯಲ್ಲಿ ಭಾರತೀಯ ಆಟಗಾರ್ತಿಯರ ಕಣ್ತುಂಬಿ ಬಂದಿತ್ತು.