ಮುಂಬೈ: ಜಿಂಬಾಬ್ವೆಯಲ್ಲಿ ನಡೆಯಲಿರುವ ಮೂರು ಪಂದ್ಯಗಳ ಏಕದಿನ ಸರಣಿಗೆ ಮೊನ್ನೆಯಷ್ಟೇ ಟೀಂ ಇಂಡಿಯಾ ಪ್ರಕಟಿಸಲಾಗಿದೆ. ಈ ಸರಣಿಗೆ ಕೊಹ್ಲಿ ತಂಡಕ್ಕೆ ಮರಳಬಹುದು ಎಂಬ ಸುದ್ದಿಯಿತ್ತು.
ಆದರೆ ಕೊನೆಯ ಕ್ಷಣದಲ್ಲಿ ಕೊಹ್ಲಿ ಹೆಸರು ಇಲ್ಲದೇ ಇರುವುದು ನೋಡಿ ಅಭಿಮಾನಿಗಳಿಗೆ ನಿಜಕ್ಕೂ ಆಘಾತವಾಗಿತ್ತು. ಕಳಪೆ ಫಾರ್ಮ್ ನಲ್ಲಿರುವ ಕೊಹ್ಲಿಯನ್ನು ತಂಡದಿಂದ ಕೈಬಿಟ್ಟಿರಬಹುದು ಎಂದು ಅಭಿಮಾನಿಗಳು ಕಾಮೆಂಟ್ ಮಾಡಿದ್ದರು.
ಆದರೆ ಕೊಹ್ಲಿ ತಂಡದಿಂದ ಹೊರಗುಳಿಯಲು ಅವರೇ ಕಾರಣ ಎನ್ನಲಾಗಿದೆ. ಸ್ವತಃ ಕೊಹ್ಲಿಯೇ ಆಯ್ಕೆ ಸಮಿತಿ ಜೊತೆ ಮಾತನಾಡಿ ತಾನು ಜಿಂಬಾಬ್ವೆ ಸರಣಿಗೆ ಲಭ್ಯವಿಲ್ಲ ಎಂದಿದ್ದರು ಎನ್ನಲಾಗಿದೆ. ಏಷ್ಯಾಕಪ್ ಟೂರ್ನಿಯಿಂದ ಕೊಹ್ಲಿ ಟಿ20 ವಿಶ್ವಕಪ್ ವರೆಗೆ ಎಲ್ಲಾ ಪಂದ್ಯಾವಳಿಯಲ್ಲೂ ತಂಡದ ಭಾಗವಾಗಲಿದ್ದಾರೆ ಎನ್ನಲಾಗಿದೆ.