Select Your Language

Notifications

webdunia
webdunia
webdunia
webdunia

ವಿಂಡೀಸ್ ಸರಣಿಯಿಂದ ತಂಡದಲ್ಲಿ ಸ್ಥಾನ ಭದ್ರಪಡಿಸಿಕೊಂಡ ಶಿಖರ್ ಧವನ್

ಶಿಖರ್ ಧವನ್
ಮುಂಬೈ , ಭಾನುವಾರ, 31 ಜುಲೈ 2022 (11:00 IST)
ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗರು ಈಗ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಲು ಪೈಪೋಟಿ ನಡೆಸುತ್ತಿದ್ದಾರೆ.

ಶಿಖರ್ ಧವನ್ ಕಳೆದ ಕೆಲವು ಸಮಯದಿಂದ ಟಿ20 ತಂಡದಲ್ಲಿ ಸ್ಥಾನ ಪಡೆಯುತ್ತಲೇ ಇಲ್ಲ. ಆದರೆ ಅವರಿಗೆ ವಿಶ್ವಕಪ್ ಆಡುವ ಮಹದಾಸೆಯಿದೆ. ಇದಕ್ಕೆ ವೆಸ್ಟ್ ಇಂಡೀಸ್ ಸರಣಿ ಭದ್ರ ಅಡಿಪಾಯ ಹಾಕಿಕೊಟ್ಟಿದೆ ಎನ್ನಬಹುದು.

ವಿಂಡೀಸ್ ಸರಣಿಯಲ್ಲಿ ಧವನ್ ನಿಧಾನಗತಿಯ ಆಟವಾಡಿ ಕೊಂಚ ಟೀಕೆಗೊಳಗಾಗಿದ್ದು ಇದೆ. ಆದರೆ ರನ್ ಗಳಿಸಿ ಭಾರತ ತಂಡಕ್ಕೆ ಭದ್ರ ಅಡಿಪಾಯ ಹಾಕಿಕೊಡುತ್ತಿದ್ದರು. ಹೀಗಾಗಿ ತಾನು ಇನ್ನೂ ಟಿ20 ವಿಶ್ವಕಪ್ ತಂಡಕ್ಕೆ ಸ್ಥಾನ ಪಡೆಯಬಹುದಾದ ಆಟಗಾರರ  ರೇಸ್ ನಲ್ಲಿರುವುದಾಗಿ ಸುಳಿವು ನೀಡಿದ್ದಾರೆ. ರೋಹಿತ್ ಶರ್ಮಾರ ಮೆಚ್ಚಿನ ಆಟಗಾರರಾಗಿರುವ ಧವನ್ ಟಿ20 ವಿಶ್ವಕಪ್ ತಂಡಕ್ಕೆ ವಾಪಸಾತಿಯಾದರೂ ಅಚ್ಚರಿಯಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಜಿಂಬಾಬ್ವೆ ಸರಣಿಗೆ ವಿರಾಟ್ ಕೊಹ್ಲಿಯನ್ನು ಡ್ರಾಪ್ ಮಾಡಿದ್ರಾ?