Select Your Language

Notifications

webdunia
webdunia
webdunia
webdunia

ಕಾಮನ್ ವೆಲ್ತ್ ಗೇಮ್ಸ್: ಭಾರತಕ್ಕೆ ಮತ್ತೊಂದು ಸ್ವರ್ಣ ಗೆದ್ದುಕೊಟ್ಟ ಅಚಿಂತಾ ಶೆಯುಲಿ

ಕಾಮನ್ ವೆಲ್ತ್ ಗೇಮ್ಸ್: ಭಾರತಕ್ಕೆ ಮತ್ತೊಂದು ಸ್ವರ್ಣ ಗೆದ್ದುಕೊಟ್ಟ ಅಚಿಂತಾ ಶೆಯುಲಿ
ಬರ್ಮಿಂಗ್ ಹ್ಯಾಮ್ , ಸೋಮವಾರ, 1 ಆಗಸ್ಟ್ 2022 (08:10 IST)
ಬರ್ಮಿಂಗ್ ಹ್ಯಾಮ್: ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ವೈಟ್ ಲಿಫ್ಟರ್ ಗಳು ಭಾರತದ ಕೀರ್ತಿ ಪತಾಕೆ ಮತ್ತಷ್ಟು ಹೆಚ್ಚಿಸುತ್ತಿದ್ದಾರೆ. 73 ಕೆ.ಜಿ. ವಿಭಾಗದಲ್ಲಿ ಭಾರತದ ಅಚಿಂತಾ ಶೆಯುಲಿ ಚಿನ್ನದ ಪದಕ ತಮ್ಮದಾಗಿಸಿದ್ದಾರೆ.

ಒಟ್ಟು 313 ಕೆ.ಜಿ. ಭಾರ ಎತ್ತಿದ 20 ವರ್ಷದ ಅಚಿಂತಾ ಭಾರತಕ್ಕೆ ಮೂರನೇ ಚಿನ್ನದ ಪದಕ ಗೆದ್ದುಕೊಟ್ಟಿದ್ದಾರೆ. ಈ ಮೂಲಕ ಭಾರತದ ಪದಕದ ಸಂಖ್ಯೆ ಆರಕ್ಕೆ ಏರಿಕೆಯಾಗಿದೆ.

ಮೊದಲ ಸುತ್ತಿನಲ್ಲಿ ಅಚಿಂತಾ 140 ಕೆ.ಜಿ. ಎರಡನೇ ಸುತ್ತಿನಲ್ಲಿ 143 ಕೆ.ಜಿ. ಮತ್ತು ಅಂತಿಮ ಸುತ್ತಿನಲ್ಲಿ 170 ಕೆ.ಜಿ. ಭಾರ ಎತ್ತುವ ಮೂಲಕ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಮನ್ ವೆಲ್ತ್ ಗೇಮ್ಸ್ ಭಾರತ ಮಹಿಳಾ ಕ್ರಿಕೆಟ್ ಪಂದ್ಯಕ್ಕೆ ಮಳೆ ಅಡ್ಡಿ