ಬರ್ಮಿಂಗ್ ಹ್ಯಾಮ್: ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಬಹಳ ವರ್ಷಗಳ ನಂತರ ಈ ಬಾರಿ ಕ್ರಿಕೆಟ್ ನ್ನು ಸೇರ್ಪಡೆಗೊಳಿಸಲಾಗಿದೆ. ಭಾರತ ಮಹಿಳಾ ತಂಡ ಕನಿಷ್ಠ ಕಂಚು ಗೆಲ್ಲಬಹುದು ಎಂಬ ವಿಶ್ವಾಸ ಅಭಿಮಾನಿಗಳಲ್ಲಿದೆ.
ನಿನ್ನೆ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತ ತಂಡ 8 ವಿಕೆಟ್ ಗಳ ಭರ್ಜರಿ ಜಯ ಗಳಿಸಿತ್ತು. ಈ ಪಂದ್ಯದಲ್ಲಿ ಸ್ಪೋಟಕ ಬ್ಯಾಟಿಂಗ್ ನಡೆಸಿದ ಭಾರತದ ಆರಂಭಿಕ ಆಟಗಾರ್ತಿ ಸ್ಮೃತಿ ಮಂಥನಾ 42 ಎಸೆತಗಳಿಂದ 63 ರನ್ ಗಳಿಸಿ ಗೆಲುವಿನ ರೂವಾರಿಯಾದರು.
ಗೆಲುವಿನ ಬಳಿಕ ಮಾತನಾಡಿರುವ ಸ್ಮೃತಿ ಭಾರತಕ್ಕೆ ಚಿನ್ನ ಗೆಲ್ಲುವುದೇ ನಮ್ಮ ಗುರಿ ಎಂದಿದ್ದಾರೆ. ಈ ಟೂರ್ನಿಯಲ್ಲಿ ಭಾರತಕ್ಕಿರುವ ಏಕೈಕ ಪ್ರಬಲ ಎದುರಾಳಿಯೆಂದರೆ ಆಸ್ಟ್ರೇಲಿಯಾ. ಮೊದಲ ಪಂದ್ಯದಲ್ಲೇ ಭಾರತ ಆಸೀಸ್ ಎದುರು ಆಡಿತ್ತು. ಆ ಪಂದ್ಯದಲ್ಲಿ ಭಾರತ ಕೊನೆಯ ಹಂತದಲ್ಲಿ ಸೋಲು ಕಂಡಿತ್ತು. ಒತ್ತಡ ನಿಭಾಯಿಸಲು ಕಲಿತರೆ ಆಸ್ಟ್ರೇಲಿಯಾವನ್ನೂ ಸೋಲಿಸುವ ಶಕ್ತಿ ಭಾರತಕ್ಕಿದೆ.