ಟ್ರಿನಿಡಾಡ್: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಇಂದು ಎರಡನೇ ಟಿ20 ಪಂದ್ಯ ನಡೆಯಲಿದೆ. ಮೊದಲ ಟಿ20 ಪಂದ್ಯವನ್ನು ಭಾರತ ಗೆದ್ದುಕೊಂಡಿತ್ತು.
ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಬ್ಯಾಟಿಂಗ್ ನಲ್ಲಿ ಬಲಿಷ್ಠವಾಗಿದೆ. ಆದರೆ ಕಳೆದ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್, ರಿಷಬ್ ಪಂತ್, ಹಾರ್ದಿಕ್ ಪಾಂಡ್ಯ ಕ್ಲಿಕ್ ಆಗಿಲ್ಲ. ಕೊನೆಯಲ್ಲಿ ಸಿಡಿಯುವ ದಿನೇಶ್ ಕಾಋ್ತಿಕ್ ಭಾರತಕ್ಕೆ ಪ್ಲಸ್ ಪಾಯಿಂಟ್.
ಇತ್ತ ನಿಕಲಸ್ ಪೂರನ್, ಹೆಟ್ಮೈರ್, ಮೇಯರ್ಸ್ ರಂತಹ ಬ್ಯಾಟಿಗರನ್ನು ಹೊಂದಿರುವ ವಿಂಡೀಸ್ ಗೆ ತಿರುಗಿ ಬೀಳುವ ಶಕ್ತಿಯಿದೆ. ಹೀಗಾಗಿ ಟೀಂ ಇಂಡಿಯಾ ಬೌಲರ್ ಗಳು ನಿಯಂತ್ರಿತ ದಾಳಿ ಸಂಘಟಿಸಬೇಕು. ಈ ಪಂದ್ಯ ಭಾರತೀಯ ಕಾಲಮಾನ ಪ್ರಕಾರ ರಾತ್ರಿ 8 ಗಂಟೆಗೆ ಆರಂಭವಾಗಲಿದೆ.