Webdunia - Bharat's app for daily news and videos

Install App

ರಿಯೋದಲ್ಲಿ ಟೆನ್ನಿಸ್ ಸಿಂಗಲ್ಸ್, ಡಬಲ್ಸ್, ಮಿಶ್ರ ಡಬಲ್ಸ್ ಆಡಲು ನಡಾಲ್ ನಿರ್ಧಾರ

Webdunia
ಬುಧವಾರ, 3 ಆಗಸ್ಟ್ 2016 (12:55 IST)
ರಾಫೆಲ್ ನಡಾಲ್ ಎಡಗೈ ಮಣಿಕಟ್ಟು ಗಾಯದಿಂದ ಚೇತರಿಸಿಕೊಳ್ಳುತ್ತಿದ್ದು,  ಒಲಿಂಪಿಕ್ಸ್‌ನಲ್ಲಿ ಸಿಂಗಲ್ಸ್, ಡಬಲ್ಸ್ ಮತ್ತು ಮಿಶ್ರ ಡಬಲ್ಸ್ ಆಡುವುದಕ್ಕೆ ತಾವು ಬದ್ಧರಾಗಿರುವುದಾಗಿ  ಹೇಳಿದ್ದಾರೆ. ತಂಡದ ಜತೆ ಚರ್ಚಿಸಿದ ಬಳಿಕ ನನಗೆ ಸಾಧ್ಯವಾದ ಎಲ್ಲಾ ವಿಭಾಗಗಳಲ್ಲೂ ಆಡಲು ನಿರ್ಧರಿಸಿದೆ ಎಂದು 30ವರ್ಷದ ಸ್ಪೇನ್ ಆಟಗಾರ ಜತೆಗಾರ ಡೇವಿಡ್ ಫೆರರ್ ಜತೆ 90 ನಿಮಿಷಗಳ ತರಬೇತಿ ಸೆಷನ್ ಬಳಿಕ ತಿಳಿಸಿದರು.
 
ವಿಶ್ವ ನಂಬರ್ 5 ನಡಾಲ್ ತಮ್ಮ ಅಭ್ಯಾಸದ ಬಳಿಕ ಸೆಂಟರ್‌ ಕೋರ್ಟ್‌ನಲ್ಲಿ ಸುದೀರ್ಘ ಅವಧಿಯನ್ನು ಕಳೆದು ಟೀಂ ವೈದ್ಯರು ಮತ್ತು ಟೀಂ ನಾಯಕ ಮಾರ್ಟಿನೆಜ್ ಜತೆಗೆ ತಮ್ಮ ಯೋಜನೆಯನ್ನು ಕುರಿತು ಚರ್ಚಿಸಿದರು.
 
ನಡಾಲ್ ಎಡಮಣಿಕಟ್ಟಿನಲ್ಲಿ ಸ್ನಾಯುರಜ್ಜು ಹಾನಿಯಿಂದ ಮೂರನೇ ಸುತ್ತು ಆರಂಭಕ್ಕೆ ಮುಂಚಿತವಾಗಿಯೇ ಫ್ರೆಂಚ್ ಓಪನ್ ತ್ಯಜಿಸಿದ್ದರು. ಗಾಯದ ಕಾರಣದಿಂದಾಗಿ ವಿಂಬಲ್ಡನ್ ಕೂಡ ಮಿಸ್ ಮಾಡಿಕೊಂಡಿದ್ದರು. ತಮ್ಮ ಮಣಿಕಟ್ಟಿನಲ್ಲಿ ನಡಾಲ್ ಧರಿಸಿದ್ದ ರಕ್ಷಣಾತ್ಮಕ ಪಟ್ಟಿ ಮಂಗಳವಾರ ಕಂಡುಬಂದಿಲ್ಲ.
 
2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ನಡಾಲ್ ಚಿನ್ನದ ಪದಕ ವಿಜೇತರಾಗಿದ್ದರು. ಆದರೆ ಮಂಡಿ ಗಾಯದಿಂದಾಗಿ 2012ರ ಲಂಡನ್ ಒಲಿಂಪಿಕ್ಸ್ ಮಿಸ್ ಮಾಡಿಕೊಂಡಿದ್ದರು.  ಶುಕ್ರವಾರ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಅವರು ದೇಶದ ಧ್ವಜವನ್ನು ಒಯ್ಯಲಿದ್ದಾರೆ. ಡಬಲ್ಸ್‌ನಲ್ಲಿ ತಮ್ಮ ಪದಕದ ಅವಕಾಶ ಹೆಚ್ಚಾಗಿದೆ ಎಂದೂ ಈ ಸಂದರ್ಭದಲ್ಲಿ ನಡಾಲ್ ಹೇಳಿದರು. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

 

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs ENG: 21 ಟೆಸ್ಟ್, 16 ಬಾರಿ 50 ಪ್ಲಸ್ ರನ್, ಟೆಸ್ಟ್ ನಲ್ಲಿ ವೀರ ಯಶಸ್ವಿ ಜೈಸ್ವಾಲ್

IND vs ENG: ಟಾಸ್ ಗೆದ್ದಇಂಗ್ಲೆಂಡ್, ಟೀಂ ಇಂಡಿಯಾದಲ್ಲಿ ಹಲವು ಬದಲಾವಣೆ

IND vs ENG: ಭಾರತ ಇಂಗ್ಲೆಂಡ್ ದ್ವಿತೀಯ ಟೆಸ್ಟ್ ಪಂದ್ಯದ ಪಿಚ್ ಯಾರಿಗೆ ಸಹಕಾರಿ

IND vs ENG: ದ್ವಿತೀಯ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಗ್ಯಾರಂಟಿ

ಹಲವು ಮಹಿಳೆಯರೊಂದಿಗೆ ಆಫೇರ್‌, ಆರ್‌ಸಿಬಿ ಆಟಗಾರನ ವಿರುದ್ಧ ಮಹಿಳೆ ದೂರು

ಮುಂದಿನ ಸುದ್ದಿ
Show comments