Publish Date: Wed, 08 Sep 2021 (10:16 IST)
Updated Date: Wed, 08 Sep 2021 (10:17 IST)
ನವದೆಹಲಿ: ಟೋಕಿಯೋ ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆದ್ದ ಜ್ವಾವೆಲಿನ್ ಥ್ರೋ ಆಟಗಾರ ನೀರಜ್ ಚೋಪ್ರಾ ಈಗ ಬಹುಬೇಡಿಕೆಯ ಸೆಲೆಬ್ರಿಟಿಯಾಗಿದ್ದಾರೆ.
ಇದರ ಪರಿಣಾಮ ಅವರ ಮಾರುಕಟ್ಟೆ ಮೌಲ್ಯವೂ ಭಾರೀ ಏರಿಕೆಯಾಗಿದೆ. ಇದೀಗ ಹೊಸದಾಗಿ ಜಾಹೀರಾತು ಒಪ್ಪಂದಗಳಿಗೆ ಸಹಿ ಹಾಕಲು ನೀರಜ್ ಈ ಮೊದಲಿಗಿಂತ 10 ಪಟ್ಟು ಹೆಚ್ಚು ಶುಲ್ಕ ಕೇಳುತ್ತಿದ್ದಾರೆ ಎಂದು ತಿಳಿದುಬಂದಿದೆ.
ಈ ಮೊದಲು ಅವರು ವರ್ಷಕ್ಕೆ ಜಾಹೀರಾತು ಒಪ್ಪಂದಗಳಿಗೆ 10-15 ಲಕ್ಷ ರೂ. ಆದಾಯ ಗಳಿಸುತ್ತಿದ್ದರು. ಆದರೆ ಈಗ ಅದರ 10 ಪಟ್ಟು ಅಧಿಕ ಡಿಮ್ಯಾಂಡ್ ಮಾಡುತ್ತಿದ್ದಾರಂತೆ. ಹೀಗಾಗಿ ಅವರ ಮಾರುಕಟ್ಟೆ ಮೌಲ್ಯ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸನಿಹ ಬರುತ್ತಿದೆ ಎಂದು ಮಾರುಕಟ್ಟೆ ತಜ್ಞರು ಹೇಳುತ್ತಿದ್ದಾರೆ. ಈಗಾಗಲೇ ನೀರಜ್ ಐದರಿಂದ ಆರು ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳುವ ನಿಟ್ಟಿನಲ್ಲಿ ಮಾತುಕತೆ ನಡೆಸುತ್ತಿದ್ದಾರಂತೆ.