Select Your Language

Notifications

webdunia
webdunia
webdunia
webdunia

ಕಳಪೆ ಫಾರ್ಮ್ ನಲ್ಲಿದ್ದರೂ ಅಜಿಂಕ್ಯಾ ರೆಹಾನೆಗೆ ಅದೃಷ್ಟ!

ಕಳಪೆ ಫಾರ್ಮ್ ನಲ್ಲಿದ್ದರೂ ಅಜಿಂಕ್ಯಾ ರೆಹಾನೆಗೆ ಅದೃಷ್ಟ!
ಲಂಡನ್ , ಮಂಗಳವಾರ, 7 ಸೆಪ್ಟಂಬರ್ 2021 (12:13 IST)
ಲಂಡನ್: ಇಂಗ್ಲೆಂಡ್ ವಿರುದ್ಧ ಸತತ ವೈಫಲ್ಯ ಅನುಭವಿಸಿದರೂ ಟೀಂ ಇಂಡಿಯಾ ಕ್ರಿಕೆಟಿಗ ಅಜಿಂಕ್ಯಾ ರೆಹಾನೆಗೆ ಅದೃಷ್ಟ ಮಾತ್ರ ಕೈ ಬಿಟ್ಟಿಲ್ಲ.


ಸಾಮಾನ್ಯವಾಗಿ ಟೀಂ ಇಂಡಿಯಾದಲ್ಲಿ ಸತತವಾಗಿ ರನ್ ಗಳಿಸದೇ ಹೋದರೂ ಚಾನ್ಸ್ ಸಿಗುವುದು ಕಡಿಮೆ. ಆದರೆ ರೆಹಾನೆಗೆ ಪದೇ ಪದೇ ಅವಕಾಶ ನೀಡುತ್ತಿರುವುದು ಅವರ ಹಿಂದಿನ ದಾಖಲೆಗಳನ್ನು ಪರಿಗಣಿಸಿ.

ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್ ಹೇಳಿಕೆ ಗಮನಿಸಿದರೆ ರೆಹಾನೆಗೆ ಕೊನೆಯ ಟೆಸ್ಟ್ ಪಂದ್ಯದಲ್ಲೂ ಮತ್ತೊಂದು ಅವಕಾಶ ಸಿಗುವ ಸಾಧ್ಯತೆಯಿದೆ. ಒಂದು ವೇಳೆ ಅವರು ಇಲ್ಲಿ ವಿಫಲರಾದರೂ, ಮುಂಬರುವ ಆಸ್ಟ್ರೇಲಿಯಾ ಸರಣಿಗೆ ಅವರನ್ನು ಹೊರಗಿಡುವ ಸಾಧ‍್ಯತೆ ಕಡಿಮೆ. ಯಾಕೆಂದರೆ ಆಸ್ಟ್ರೇಲಿಯಾ ವಿರುದ್ಧ ರೆಹಾನೆ ದಾಖಲೆ ಉತ್ತಮವಾಗಿದೆ. ಹೀಗಾಗಿ ಕಳಪೆ ಫಾರ್ಮ್ ನಲ್ಲಿದ್ದರೂ ರೆಹಾನೆ ಅದೃಷ್ಟ ಚೆನ್ನಾಗಿದೆ ಎನ್ನಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಹೊರಗಿನವರ ಕಿರುಚಾಟಕ್ಕೆ ಕಿವಿಯೇ ಕೊಡಲ್ಲ: ವಿರಾಟ್ ಕೊಹ್ಲಿ