ಲಂಡನ್: ಇಂಗ್ಲೆಂಡ್ ವಿರುದ್ಧ ನಾಲ್ಕನೇ ಟೆಸ್ಟ್ ಗೆದ್ದು ಸರಣಿಯಲ್ಲಿ 2-1 ರಿಂದ ಮುನ್ನಡೆ ಅನುಭವಿಸಿದ ಬಳಿಕ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪ್ರತಿಕ್ರಿಯಿಸಿದ್ದಾರೆ.
ಕಳೆದ ಪಂದ್ಯವನ್ನು ಸೋತ ಬಳಿಕ ಕೊಹ್ಲಿ ನಾಯಕತ್ವದ ಬಗ್ಗೆ, ತಂಡದಲ್ಲಿರುವ ಆಟಗಾರರ ಕಳಪೆ ಫಾರ್ಮ್ ಬಗ್ಗೆ ತೀವ್ರ ಟೀಕೆ ವ್ಯಕ್ತವಾಗಿತ್ತು. ಪಂದ್ಯದ ನಂತರ ಮಾತನಾಡಿರುವ ಕೊಹ್ಲಿ ಟೀಕಾಕಾರರಿಗೆ ತಿರುಗೇಟು ನೀಡಿದ್ದಾರೆ.
ಹೊರಗೆ ನಿಂತು ಕಿರುಚಾಡುವವರಿಗೆ ನಾವು ಕಿವಿಯೇ ಕೊಡಲ್ಲ. ಅವರು ಏನಾದರೂ ಹೇಳುತ್ತಿರಲಿ. ಅದು ನಮಗೆ ತಲುಪುವುದೇ ಇಲ್ಲ ಎಂದು ಕೊಹ್ಲಿ ತಿರುಗೇಟು ಕೊಟ್ಟಿದ್ದಾರೆ. ಇನ್ನು, ಈ ಪಂದ್ಯದಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ ರೋಹಿತ್ ಶರ್ಮಾ, ಶ್ರಾದ್ಧೂಲ್ ಠಾಕೂರ್ ಬಗ್ಗೆ ಕೊಹ್ಲಿ ವಿಶೇಷವಾಗಿ ಅಭಿನಂದಿಸಿದ್ದಾರೆ.