Select Your Language

Notifications

webdunia
webdunia
webdunia
webdunia

ರೆಹಾನೆ ಕಳಪೆ ಫಾರ್ಮ್ ಬಗ್ಗೆ ಬ್ಯಾಟಿಂಗ್ ಕೋಚ್ ಮಹತ್ವದ ಹೇಳಿಕೆ

ರೆಹಾನೆ ಕಳಪೆ ಫಾರ್ಮ್ ಬಗ್ಗೆ ಬ್ಯಾಟಿಂಗ್ ಕೋಚ್ ಮಹತ್ವದ ಹೇಳಿಕೆ
ಲಂಡನ್ , ಸೋಮವಾರ, 6 ಸೆಪ್ಟಂಬರ್ 2021 (10:57 IST)
ಲಂಡನ್: ಟೀಂ ಇಂಡಿಯಾ ಬ್ಯಾಟ್ಸ್ ಮನ್ ಅಜಿಂಕ್ಯಾ ರೆಹಾನೆ ಸತತ ವೈಫಲ್ಯದ ಬಗ್ಗೆ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್ ಪ್ರತಿಕ್ರಿಯಿಸಿದ್ದಾರೆ.


ಮಾಧ್ಯಮಗಳ ಮುಂದೆ ಮಾತನಾಡಿರುವ ವಿಕ್ರಮ್ ರಾಥೋರ್, ರೆಹಾನೆ ಕಳಪೆ ಫಾರ್ಮ್ ನಮಗೆ ಸಮಸ್ಯೆಯಲ್ಲ ಎಂದಿದ್ದಾರೆ. ಇಂತಹ ಸಂದರ್ಭದಲ್ಲಿ ಅವರಿಗೆ ಬೆಂಬಲ ನೀಡಬೇಕಿದೆ. ಈಗಲೇ ಅವರ ಬ್ಯಾಟಿಂಗ್ ಬಗ್ಗೆ ಅಂತಿಮ ನಿರ್ಧಾರಕ್ಕೆ ಬರಲಾಗದು ಎಂದಿದ್ದಾರೆ.

ರೆಹಾನೆ ಸತತವಾಗಿ ಕಳಪೆ ಮೊತ್ತಕ್ಕೆ ಔಟಾಗುತ್ತಿರುವುದರಿಂದ ಅವರನ್ನು ಮುಂದಿನ ಪಂದ್ಯಕ್ಕೆ ತಂಡದಿಂದ ಹೊರಗಿಡಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ. ಆದರೆ ಬ್ಯಾಟಿಂಗ್ ಕೋಚ್ ಹೇಳಿಕೆ ಗಮನಿಸಿದರೆ ಮುಂದಿನ ಪಂದ್ಯದಲ್ಲೂ ಅವರಿಗೆ ಮತ್ತೊಂದು ಅವಕಾಶ ನೀಡುವ ಸಾಧ‍್ಯತೆಯಿದೆ ಎನಿಸುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಟೀಂ ಇಂಡಿಯಾಕ್ಕೆ ಶಾಕ್: ಇಂದು ಮೈದಾನಕ್ಕಿಳಿಯಲ್ಲ ಈ ಇಬ್ಬರು ಸ್ಟಾರ್ ಆಟಗಾರರು