Publish Date: Mon, 06 Sep 2021 (09:47 IST)
Updated Date: Mon, 06 Sep 2021 (09:58 IST)
ಲಂಡನ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದ ಅಂತಿಮ ದಿನವಾದ ಇಂದು ಒತ್ತಡದಲ್ಲಿರುವ ಟೀಂ ಇಂಡಿಯಾಗೆ ಮತ್ತೊಂದು ಶಾಕ್ ಸಿಕ್ಕಿದೆ.
ಇಂದಿನ ದಿನ ಸ್ಟಾರ್ ಕ್ರಿಕೆಟಿಗರಾದ ರೋಹಿತ್ ಶರ್ಮಾ ಮತ್ತು ಚೇತೇಶ್ವರ ಪೂಜಾರ ಮೈದಾನಕ್ಕಿಳಿಯಲ್ಲ. ಇಬ್ಬರೂ ಗಾಯದ ಕಾರಣದಿಂದ ಫೀಲ್ಡಿಂಗ್ ಮಾಡಲು ಇಂದು ಕಣಕ್ಕಿಳಿಯಲ್ಲ.
ರೋಹಿತ್ ಗೆ ಎಡ ಮೊಣಕಾಲಿನ ಗಾಯಕ್ಕೊಳಗಾಗಿದ್ದರೆ, ಪೂಜಾರ ಬಲ ಕಾಲಿನ ಗಾಯಕ್ಕೊಳಗಾಗಿದ್ದಾರೆ. ಹೀಗಾಗಿ ಇಬ್ಬರೂ ಇಂದಿನ ದಿನದಾಟದಲ್ಲಿ ಕಣಕ್ಕಿಳಿಯಲ್ಲ. ಇಬ್ಬರೂ ಕಂಪ್ಲೀಟ್ ಬ್ಯಾಟ್ಸ್ ಮನ್ ಗಳಾಗಿದ್ದು, ಅವರ ಪಾಳಿ ಮುಕ್ತಾಯವಾಗಿರುವುದು ಕೊಂಚ ಸಮಾಧಾನಕರ ವಿಚಾರವಾಗಿದೆ.