Publish Date: Tue, 07 Sep 2021 (09:40 IST)
Updated Date: Tue, 07 Sep 2021 (10:03 IST)
ಲಂಡನ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಮುಗಿದ ಬಳಿಕ ಟೀಂ ಇಂಡಿಯಾದಲ್ಲಿ ಗಾಯಾಳುಗಳ ಲಿಸ್ಟ್ ಹೆಚ್ಚಾಗಿದೆ.
ನಾಲ್ಕನೇ ದಿನದಾಟದ ಬಳಿಕ ರೋಹಿತ್ ಶರ್ಮಾ ಮೊಣಕಾಲಿನ ಗಾಯಕ್ಕೆ ತುತ್ತಾದರೆ, ಚೇತೇಶ್ವರ ಪೂಜಾರ ಪಾದದ ಗಾಯಕ್ಕೊಳಗಾಗಿದ್ದರು. ಇನ್ನು, ವೇಗಿ ಜಸ್ಪ್ರೀತ್ ಬುಮ್ರಾ ಕೂಡಾ ಸ್ನಾಯು ಸೆಳೆತಕ್ಕೊಳಗಾಗಿದ್ದಾರೆ.
ಈ ಮೂವರೂ ಪ್ರಮುಖ ಆಟಗಾರರ ಗಾಯ ಈಗ ಟೀಂ ಇಂಡಿಯಾ ಚಿಂತೆಗೆ ಕಾರಣವಾಗಿದೆ. ಅಂತಿಮ ಟೆಸ್ಟ್ ಪಂದ್ಯವನ್ನು ಗೆಲ್ಲಬೇಕಾದರೆ ಟೀಂ ಇಂಡಿಯಾಗೆ ಈ ಆಟಗಾರರ ಲಭ್ಯತೆ ತುಂಬಾ ಮುಖ್ಯವಾಗಲಿದೆ. ಆದರೆ ನಾಲ್ಕನೇ ಪಂದ್ಯದ ಬಳಿಕ ತಮ್ಮ ಗಾಯ ಗಂಭೀರವಲ್ಲ ಎಂದು ರೋಹಿತ್ ಶರ್ಮಾ ಹೇಳಿರುವುದು ಕೊಂಚ ಸಮಾಧಾನಕರ ವಿಚಾರವಾಗಿದೆ.