Publish Date: Tue, 07 Sep 2021 (10:50 IST)
Updated Date: Tue, 07 Sep 2021 (11:00 IST)
ಮುಂಬೈ: ಇಂಗ್ಲೆಂಡ್ ವಿರುದ್ಧ ಟೆಸ್ಟ್ ಪಂದ್ಯ ಗೆಲುವಿನ ಬಳಿಕವೂ ನಾಯಕ ಕೊಹ್ಲಿ ಮತ್ತು ಕೋಚ್ ರವಿಶಾಸ್ತ್ರಿ ಮೇಲೆ ಬಿಸಿಸಿಐ ಗರಂ ಆಗಿದೆ ಎಂದು ತಿಳಿದುಬಂದಿದೆ. ಆದರೆ ಇದಕ್ಕೆ ಕಾರಣ ಬೇರೆಯೇ ಇದೆ.
ನಾಲ್ಕನೇ ಟೆಸ್ಟ್ ಪಂದ್ಯದ ನಡುವೆ ಕೋಚ್ ರವಿಶಾಸ್ತ್ರಿ, ಬೌಲಿಂಗ್ ಕೋಚ್ ಭರತ್ ಅರುಣ್, ಫೀಲ್ಡಿಂಗ್ ಕೋಚ್ ಆರ್. ಶ್ರೀಧರ್ ಗೆ ಕೊರೋನಾ ಸೋಂಕು ದೃಢಪಟ್ಟಿದೆ.
ಇದಕ್ಕೆ ಕಾರಣ ರವಿಶಾಸ್ತ್ರಿ ಹಾಗೂ ವಿರಾಟ್ ಕೊಹ್ಲಿ ಇತ್ತೀಚೆಗೆ ನಿಯಮಗಳನ್ನು ಮುರಿದು ಪುಸ್ತಕ ಅನಾವರಣ ಕಾರ್ಯಕ್ರಮವೊಂದಕ್ಕೆ ತೆರಳಿದ್ದು ಎನ್ನಲಾಗಿದೆ. ಇಲ್ಲಿ ಸೋಂಕು ಪಡೆದುಕೊಂಡಿದ್ದ ಬಂದಿದ್ದ ರವಿಶಾಸ್ತ್ರಿಯಿಂದ ಇತರ ಸಹಾಯಕ ಸಿಬ್ಬಂದಿಗಳಿಗೂ ಸೋಂಕು ಹರಡಿದೆ. ಇದು ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗಿದೆ. ಕ್ವಾರಂಟೈನ್ ನಿಯಮ ಮುರಿದು ಕ್ರಿಕೆಟ್ ಹೊರತಾದ ಕಾರ್ಯಕ್ರಮಕ್ಕೆ ತೆರಳಿದ್ದು, ಬಿಸಿಸಿಐ ಆಕ್ರೋಶಕ್ಕೆ ಗುರಿಯಾಗಿದ್ದು, ಈ ಸಂಬಂಧ ಇಬ್ಬರಿಂದ ವಿವರಣೆ ಕೇಳಲಿದೆ ಎನ್ನಲಾಗಿದೆ.