Publish Date: Wed, 08 Sep 2021 (09:30 IST)
Updated Date: Wed, 08 Sep 2021 (09:44 IST)
ಲಂಡನ್: ಇಂಗ್ಲೆಂಡ್ ವಿರುದ್ಧ ನಾಲ್ಕನೇ ಟೆಸ್ಟ್ ಗೆಲುವಿನ ಬಳಿಕ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮ ತಂಡವನ್ನು ಹೊಗಳಿದ್ದಾರೆ.
ಅದರಲ್ಲೂ ವಿಶೇಷವಾಗಿ ಆಲ್ ರೌಂಡರ್ ರವೀಂದ್ರ ಜಡೇಜಾ ಬೌಲಿಂಗ್ ನ್ನು ಕೊಂಡಾಡಿದ್ದಾರೆ. ಹೀಗಾಗಿ ಮುಂದಿನ ಟೆಸ್ಟ್ ನಲ್ಲೂ ಅವರೇ ಆಡುವುದು ಬಹುತೇಕ ಕನ್ ಫರ್ಮ್ ಆಗಿದೆ.
ಇದರಿಂದಾಗಿ ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಗೆ ಕೊನೆಯ ಪಂದ್ಯದಲ್ಲೂ ಅವಕಾಶ ಸಿಗುವ ಸಾಧ್ಯತೆ ಕಡಿಮೆ. ಈ ಪಂದ್ಯದಲ್ಲಿ ವಿಕೆಟ್ ಲೆಸ್ ಆಗಿದ್ದ ಮೊಹಮ್ಮದ್ ಸಿರಾಜ್ ಗೆ ಮತ್ತೊಂದು ಅವಕಾಶ ಸಿಗುವ ಸಾಧ‍್ಯತೆಯಿದೆ. ಹೀಗಾಗಿ ಇದೇ ಗೆಲುವಿನ ತಂಡವನ್ನು ಕೊಹ್ಲಿ ಮುಂದಿನ ಪಂದ್ಯಕ್ಕೂ ಮುಂದುವರಿಸಬಹುದು.