ನವದೆಹಲಿ: ಭಾರತ ಕಾಮನ್ ವೆಲ್ತ್ ಗೇಮ್ಸ್ ಗೂ ಆತಿಥ್ಯ ವಹಿಸಿದೆ. ಆದರೆ ಒಲಿಂಪಿಕ್ಸ್ ಆಯೋಜಿಸುವುದು ಕನಸಾಗಿಯೇ ಉಳಿದಿದೆ. ಆದರೆ ಈಗ ಸರ್ಕಾರ ಆ ನಿಟ್ಟಿನಲ್ಲಿಯೂ ಹೆಜ್ಜೆ ಹಾಕುತ್ತಿದೆ.
ಇದೀಗ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ ಮುಖ್ಯಸ್ಥ ಥಾಮಸ್ ಬಾಕ್ ಈ ಬಗ್ಗೆ ಹೇಳಿಕೆಯೊಂದನ್ನು ನೀಡಿದ್ದಾರೆ. 2032 ರ ಒಲಿಂಪಿಕ್ಸ್ ಆಸ್ಟ್ರೇಲಿಯಾದಲ್ಲಿ ನಡೆಯುವುದು ಪಕ್ಕಾ ಆಗಿದೆ.
ಆದರೆ 2036 ಮತ್ತು 2040 ನೇ ಒಲಿಂಪಿಕ್ಸ್ ಆತಿಥ್ಯ ವಹಿಸಲು ಹಲವು ರಾಷ್ಟ್ರಗಳು ಪೈಪೋಟಿಯಲ್ಲಿವೆ. ಈ ಪೈಕಿ ಭಾರತವೂ ಸ್ಪರ್ಧೆಯಲ್ಲಿದೆ. ಭಾರತವೂ 2036 ಅಥವಾ 2040 ನೇ ಒಲಿಂಪಿಕ್ ಆಯೋಜಿಸಲು ಆಸಕ್ತಿ ತೋರಿಸಿದೆ. ಭಾರತದ ಜೊತೆಗೆ ಕತಾರ್, ಇಂಡೋನೇಷ್ಯಾ, ಜರ್ಮನಿ ದೇಶಗಳೂ ಸ್ಪರ್ಧೆಯಲ್ಲಿವೆ ಎಂದಿದ್ದಾರೆ. ಹೀಗಾಗಿ ಮುಂದೊಂದು ದಿನ ಭಾರತದಲ್ಲೂ ಒಲಿಂಪಿಕ್ ನಡೆಯುವುದು ಖಚಿತವಾಗಿದೆ.