Publish Date: Tue, 24 Aug 2021 (11:35 IST)
Updated Date: Tue, 24 Aug 2021 (09:10 IST)
ಮುಂಬೈ: ಟಿ20 ವಿಶ್ವಕಪ್ ಆರಂಭಕ್ಕೆ ಇನ್ನೇನು ಒಂದು ತಿಂಗಳು ಬಾಕಿಯಿದೆ. ಇದೀಗ ಟಿ20 ವಿಶ್ವಕಪ್ ನಲ್ಲಿ ಯಾರೆಲ್ಲಾ ಆಡಬಹುದು ಎಂಬ ಚರ್ಚೆ ಶುರುವಾಗಿದೆ.
ತಂಡದ ಆಯ್ಕೆ ಕುರಿತಂತೆ ಈಗಾಗಲೇ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ನಾಯಕ ವಿರಾಟ್ ಕೊಹ್ಲಿ ಜೊತೆ ಇಂಗ್ಲೆಂಡ್ ನಲ್ಲಿ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಇದೀಗ ತಂಡದ ಆಯ್ಕೆ ಯಾವಾಗ ನಡೆಯಬಹುದು ಎಂಬ ಕುತೂಹಲವಿದೆ.
ಮೂಲಗಳ ಪ್ರಕಾರ ಸೆಪ್ಟೆಂಬರ್ ಮೊದಲ ವಾರ ಅಥವಾ ಎರಡನೇ ವಾರದಲ್ಲಿ ತಂಡದ ಆಯ್ಕೆ ಪ್ರಕ್ರಿಯೆ ನಡೆಯಬಹುದು ಎನ್ನಲಾಗುತ್ತಿದೆ. ಅದಕ್ಕೂ ಮೊದಲೇ ಯಾವೆಲ್ಲಾ ಆಟಗಾರರು ಲಭ್ಯರಿರಲಿದ್ದಾರೆ ಎಂಬ ಬಗ್ಗೆ ಈಗಾಗಲೇ ಕೊಹ್ಲಿ-ಬಿಸಿಸಿಐ ಸಭೆಯಲ್ಲಿ ಫೈನಲೈಸ್ ಆಗಿದೆ ಎನ್ನಲಾಗಿದೆ.