Publish Date: Mon, 23 Aug 2021 (10:50 IST)
Updated Date: Mon, 23 Aug 2021 (10:55 IST)
ಲಂಡನ್: ಲಾರ್ಡ್ಸ್ ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಕೊನೆಯ ದಿನ ಅದ್ಭುತ ಕಮ್ ಬ್ಯಾಕ್ ಮಾಡಿ ಪಂದ್ಯ ಗೆದ್ದುಕೊಂಡ ಟೀಂ ಇಂಡಿಯಾ ಎದುರಾಳಿಯನ್ನು ಮಾನಸಿಕವಾಗಿ ಕುಗ್ಗಿಸಿದೆ.
ಟೀಂ ಇಂಡಿಯಾ ಎದುರಾಳಿ ಇಂಗ್ಲೆಂಡ್ ಗೆ ಕೊಟ್ಟ ಈ ಏಟಿನಿಂದ ಚೇತರಿಸಿಕೊಂಡು ಕಮ್ ಬ್ಯಾಕ್ ಮಾಡಬೇಕಾದರೆ ಅವರಿಗೆ ಸೂಪರ್ ಮ್ಯಾನ್ ಪವರ್ ಬೇಕು ಎಂದು ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್ ಹೇಳಿದ್ದಾರೆ.
ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಎದುರಾಳಿಗೆ ಮಾನಸಿಕವಾಗಿ ಚೇತರಿಸಲಾಗದ ಏಟು ಕೊಟ್ಟಿದೆ. ಅವರಿಗೆ ಈಗ ಸೂಪರ್ ಮ್ಯಾನ್ ಪವರ್ ಬೇಕು. ಹಾಗಿದ್ದರೂ ಕ್ರಿಕೆಟ್ ಅನಿಶ್ಚಿತತೆಯ ಆಟ. ಇಲ್ಲಿ ಏನನ್ನೂ ಮೊದಲೇ ಹೇಳಲಾಗದು ಎಂದು ಗವಾಸ್ಕರ್ ಹೇಳಿದ್ದಾರೆ.