Select Your Language

Notifications

webdunia
webdunia
webdunia
webdunia

ಲಕ್ಕೀ ಮೈದಾನದಲ್ಲಿ ಭಾರತ-ಇಂಗ್ಲೆಂಡ್ ಮೂರನೇ ಟೆಸ್ಟ್ ಇಂದಿನಿಂದ ಶುರು

webdunia
ಲೀಡ್ಸ್ , ಬುಧವಾರ, 25 ಆಗಸ್ಟ್ 2021 (08:54 IST)
ಲೀಡ್ಸ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯ ಇಂದಿನಿಂದ ಲೀಡ್ಸ್ ನ ಹೆಡ್ಡಿಂಗ್ಲೇ ಮೈದಾನದಲ್ಲಿ ಆರಂಭವಾಗಲಿದೆ.


ಈ ಮೈದಾನ ಭಾರತದ ಪಾಲಿಗೆ ಅದೃಷ್ಟದ ತಾಣ. ಇಲ್ಲಿ ಭಾರತ ಸೋತಿದ್ದೇ ಇಲ್ಲ. ಹೀಗಾಗಿ ಈ ಪಂದ್ಯವೂ ಭಾರತದ ಪಾಲಿಗೆ ಒಲಿಯಬಹುದು ಎಂಬ ವಿಶ್ವಾಸ ಅಭಿಮಾನಿಗಳದ್ದು.

ಈ ಪಂದ್ಯದಲ್ಲಿ ಟೀಂ ಇಂಡಿಯಾ ವಿಕೆಟ್ ಲೆಸ್ ರವೀಂದ್ರ ಜಡೇಜಾ ಸ್ಥಾನದಲ್ಲಿ ರವಿಚಂದ್ರನ್ ಅಶ್ವಿನ್ ರನ್ನು ಕರೆತಂದರೂ ಅಚ್ಚರಿಯಿಲ್ಲ. ಬ್ಯಾಟಿಂಗ್ ನಲ್ಲಿ ಪೂಜಾರ-ರೆಹಾನೆ ಜೋಡಿಯ ಮೇಲೆ ಟೀಕೆಗಳಿದ್ದರೂ ದ್ವಿತೀಯ ಟೆಸ್ಟ್ ನ ಎರಡನೇ ಇನಿಂಗ್ಸ್ ನಲ್ಲಿ ಇಬ್ಬರೂ ಆಡಿದ ಉಪಯುಕ್ತ ಇನಿಂಗ್ಸ್ ವರದಾನವಾಗುವ ಸಾಧ‍್ಯತೆಯಿದೆ. ಉಳಿದಂತೆ ಯಾವುದೇ ಬದಲಾವಣೆ ನಿರೀಕ್ಷಿಸಲಾಗದು. ಪಂದ್ಯ ಭಾರತೀಯ ಕಾಲಮಾನ ಪ್ರಕಾರ ಅಪರಾಹ್ನ 3.30 ಕ್ಕೆ ಆರಂಭವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಟಿ20 ವಿಶ್ವಕಪ್ ಗೆ ಟೀಂ ಇಂಡಿಯಾ ಆಯ್ಕೆ ಯಾವಾಗ?