Publish Date: Wed, 25 Aug 2021 (09:24 IST)
Updated Date: Wed, 25 Aug 2021 (09:31 IST)
ಲೀಡ್ಸ್: ಟೀಂ ಇಂಡಿಯಾ ಇಂಗ್ಲೆಂಡ್ ಗೆ ಕಾಲಿಟ್ಟಾಗಿನಿಂದ ಮಳೆಯ ಕಾಟ ಕಾಡತೊಡಗಿತ್ತು. ಇಂದಿನಿಂದ ತೃತೀಯ ಟೆಸ್ಟ್ ಪಂದ್ಯ ಆರಂಭವಾಗಲಿದ್ದು, ಮಳೆಯ ಸಾಧ‍್ಯತೆ ಬಗ್ಗೆ ಹವಾಮಾನ ವರದಿ ಏನು ಹೇಳುತ್ತದೆ ನೋಡೋಣ.
ಮೊದಲ ಪಂದ್ಯ ಮಳೆಯಿಂದಾಗಿ ಅಂತಿಮ ದಿನ ರದ್ದಾಗಿತ್ತು. ಎರಡನೇ ಪಂದ್ಯದಲ್ಲೂ ಮೊದಲ ದಿನವೇ ಮಳೆ ಕೊಂಚ ಹೊತ್ತು ಪಂದ್ಯಕ್ಕೆ ಅಡ್ಡಿಯಾಗಿತ್ತು.
ಈ ಪಂದ್ಯದಲ್ಲೂ ಮೊದಲ ದಿನ ಮೋಡ ಕವಿದ ವಾತಾವರಣವಿರಲಿದ್ದು, ಸಣ್ಣ ಮಟ್ಟಿನ ಹನಿಯಾಗುವ ಸಾಧ‍್ಯತೆಯಿದೆ ಎಂದು ಅಲ್ಲಿನ ಹವಾಮಾನ ವರದಿ ಹೇಳಿದೆ. ಹಾಗಿದ್ದರೂ ಹೊತ್ತು ಕಳೆದಂತೆ ಸೂರ್ಯನ ದರ್ಶನವಾಗಬಹುದು. ಹೀಗಾಗಿ ಪಂದ್ಯಕ್ಕೆ ದೊಡ್ಡ ಮಟ್ಟಿನ ಹಾನಿಯಾಗದು ಎನ್ನಲಾಗಿದೆ.