Select Your Language

Notifications

webdunia
webdunia
webdunia
webdunia

ಕಾಮನ್ ವೆಲ್ತ್ ಗೇಮ್ಸ್ ನಲ್ಲಿಂದು ಭಾರತಕ್ಕೆ 8 ಚಿನ್ನ ಗೆಲ್ಲುವ ಅವಕಾಶ!

ಕಾಮನ್ ವೆಲ್ತ್ ಗೇಮ್ಸ್ ನಲ್ಲಿಂದು ಭಾರತಕ್ಕೆ 8 ಚಿನ್ನ ಗೆಲ್ಲುವ ಅವಕಾಶ!
ಬರ್ಮಿಂಗ್ ಹ್ಯಾಮ್ , ಭಾನುವಾರ, 7 ಆಗಸ್ಟ್ 2022 (09:00 IST)
ಬರ್ಮಿಂಗ್ ಹ್ಯಾಮ್: ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಭಾರತ ಇಂದು ಭರ್ಜರಿ ಚಿನ್ನ ಬೇಟೆಯಾಡುವ ಅವಕಾಶ ಹೊಂದಿದೆ.

ಕ್ರಿಕೆಟ್: ಭಾರತ ಮಹಿಳಾ ಕ್ರಿಕೆಟ್ ತಂಡ ಫೈನಲ್ಸ್ ನಲ್ಲಿ ಇಂದು ಆಸ್ಟ್ರೇಲಿಯಾ ವಿರುದ್ಧ ಆಡಲಿದ್ದು, ಈ ಪಂದ್ಯದಲ್ಲಿ ಗೆದ್ದರೆ ಭಾರತಕ್ಕೆ ಚಿನ್ನದ ಪದಕ ಗ್ಯಾರಂಟಿ. ಈ ಪಂದ್ಯ ರಾತ್ರಿ 9.30 ಕ್ಕೆ ನಡೆಯಲಿದೆ.

ಟೇಬಲ್ ಟೆನಿಸ್: ಪುರುಷರ ಡಬಲ್ಸ್ ವಿಭಾಗದಲ್ಲಿ ಶರತ್ ಕಮಲ್-ಜ್ಞಾನಶೇಖರನ್ ಜೋಡಿ ಫೈನಲ್ಸ್ ಆಡಲಿದ್ದು, ಈ ಪಂದ್ಯ ಸಂಜೆ 6.15 ಕ್ಕೆ ನಡೆಯಲಿದೆ. ಶರತ್ ಕಮಲ್ ಮತ್ತು ಶ್ರೀಜಾ ಅಕುಲಾ ಜೋಡಿ ಮಿಕ್ಸೆಡ್ ಡಬಲ್ಸ್ ಹಂತಕ್ಕೆ ಏರಿದ್ದು, ಈ ಪಂದ್ಯ ಮಧ್ಯರಾತ್ರಿ 12.15 ಕ್ಕೆ ನಡೆಯಲಿದೆ.

ಬಾಕ್ಸಿಂಗ್: ಬಾಕ್ಸಿಂಗ್ ನಲ್ಲಿ ಭಾರತದ ಭರವಸೆಯ ತಾರೆ ಅಮಿತ್ ಪಂಘಲ್ ಇಂದು ಫೈನಲ್ ಕದನಕ್ಕಿಳಿಯಲಿದ್ದಾರೆ. ಈ ಪಂದ್ಯ ಅಪರಾಹ್ನ 3.15 ಕ್ಕೆ ನಡೆಯಲಿದೆ. ಸಂಜೆ 7.00 ಗಂಟೆಗೆ ನಡೆಯಲಿರುವ ಪಂದ್ಯದಲ್ಲಿ ನಿಖತ್ ಝರೀನ್ ಫೈನಲ್ಸ್ ಆಡಲಿದ್ದಾರೆ.
ಅಥ್ಲೆಟಿಕ್ಸ್: ಟ್ರಿಪಲ್ ಜಂಪ್ ವಿಭಾಗದಲ್ಲಿ ಭಾರತದ ಪ್ರವೀಣ್,ಅಬ್ದುಲ್ಲಾ, ಎಲ್ಡ್ ಹೋಸ್ ಫೈನಲ್ ಸುತ್ತಿನಲ್ಲಿದ್ದಾರೆ. ಈ ಹಣಾಹಣಿ ಮಧ‍್ಯಾಹ್ನ 2.20 ಕ್ಕೆ ನಡೆಯುವುದು. ಭಾರತ ಮಹಿಳಾ ರಿಲೇ ತಂಡ ಇಂದು ಫೈನಲ್ಸ್ ಆಡಲಿದ್ದು, ಈ ಪಂದ್ಯ ಸಂಜೆ 5.24 ಕ್ಕೆ ನಡೆಯುವುದು. ಪುರುಷರ ರಿಲೇ ತಂಡವೂ ಫೈನಲ್ ಆಡಲಿದ್ದು ಈ ಪಂದ್ಯ ಮಧ್ಯರಾತ್ರಿ 1.00 ಗಂಟೆಗೆ ನಡೆಯುವುದು.

ಇದಲ್ಲದೆ, ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು, ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಕಿಡಂಬಿ ಶ್ರೀಕಾಂತ್ ಇಂದು ಸೆಮಿಫೈನಲ್ ಪಂದ್ಯವಾಡಲಿದ್ದಾರೆ. ಇದಲ್ಲದೆ ಭಾರತ ಮಹಿಳಾ ಹಾಕಿ ತಂಡ ಕಂಚಿನ ಪದಕಕ್ಕಾಗಿ ಮಧ್ಯಾಹ್ನ 1.30 ಕ್ಕೆ ಕಣಕ್ಕಿಳಿಯಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ-ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡಗಳ ನಡುವೆ ಇಂದು ಚಿನ್ನಕ್ಕಾಗಿ ಕಾದಾಟ