ಬರ್ಮಿಂಗ್ ಹ್ಯಾಮ್: ಇದೇ ಮೊದಲ ಬಾರಿಗೆ ಕಾಮನ್ ವೆಲ್ತ್ ಗೇಮ್ಸ್ ಕೂಟದ ಕ್ರಿಕೆಟ್ ವಿಭಾಗದಲ್ಲಿ ಫೈನಲ್ ತಲುಪಿರುವ ಭಾರತ ಮಹಿಳಾ ಕ್ರಿಕೆಟ್ ತಂಡ ಇಂದು ಆಸ್ಟ್ರೇಲಿಯಾ ವಿರುದ್ಧ ಚಿನ್ನದ ಪದಕಕ್ಕಾಗಿ ಹೋರಾಟ ನಡೆಸಲಿದೆ.
ನಿನ್ನೆ ಇಂಗ್ಲೆಂಡ್ ವಿರುದ್ಧ ರೋಚಕವಾಗಿ 4 ರನ್ ಗಳಿಂದ ಪಂದ್ಯ ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದ ಹರ್ಮನ್ ಪ್ರೀತ್ ಕೌರ್ ಪಡೆ ಇಂದು ಪ್ರಬಲ ಆಸ್ಟ್ರೇಲಿಯಾವನ್ನು ಎದುರಿಸಬೇಕಿದೆ. ಆಸ್ಟ್ರೇಲಿಯಾ ವಿರುದ್ಧ ಭಾರತ ಲೀಗ್ ಪಂದ್ಯದಲ್ಲಿ ಒಮ್ಮೆ ಸೋಲು ಕಂಡಿದೆ.
ಆದರೆ ಆ ಪಂದ್ಯದಲ್ಲೂ ಭಾರತದ ಬ್ಯಾಟಿಗರು ಉತ್ತಮ ನಿರ್ವಹಣೆ ತೋರಿದ್ದರು. ಕೊನೆ ಕ್ಷಣದಲ್ಲಿ ಒತ್ತಡ ನಿಭಾಯಿಸಲಾಗದೇ ಸೋತಿದ್ದರು. ಭಾರತೀಯ ಬೌಲಿಂಗ್, ಫೀಲ್ಡಿಂಗ್ ಉತ್ಕೃಷ್ಟ ಮಟ್ಟದಲ್ಲಿರದೇ ಹೋದರೆ ಆಸ್ಟ್ರೇಲಿಯಾ ವಿರುದ್ಧ ಗೆಲ್ಲುವುದು ಕಷ್ಟವಾಗಲಿದೆ. ಈ ಪಂದ್ಯ ರಾತ್ರಿ 9.30 ಕ್ಕೆ ಆರಂಭವಾಗಲಿದೆ.