ನವದೆಹಲಿ: ನಿನ್ನೆ ಚಂದ್ರಯಾನ 3 ಯಶಸ್ವಿಯಾಗಿ ಲ್ಯಾಂಡ್ ಆಗಿದ್ದನ್ನು ಇಡೀ ಭಾರತವೇ ಸಂಭ್ರಮಿಸಿತ್ತು. ಇಂದು ಚೆಸ್ ಪಟು ಆರ್. ಪ್ರಜ್ಞಾನಂದ ಮೂಲಕ ಭಾರತ ಮತ್ತೊಂದು ಇತಿಹಾಸ ಸೃಷ್ಟಿಸುವ ನಿರೀಕ್ಷೆಯಲ್ಲಿದೆ.
ವಿಶ್ವಕಪ್ ಚೆಸ್ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ಸತತ ಎರಡನೇ ದಿನವೂ ಭಾರತದ ಗ್ರ್ಯಾಂಡ್ ಮಾಸ್ಟರ್ ಆರ್. ಪ್ರಜ್ಞಾನಂದ ವಿಶ್ವ ನಂ.1 ಮ್ಯಾಗ್ನಸ್ ಕಾರ್ಲ್ಸನ್ ವಿರುದ್ಧ ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾದರು. ಹೀಗಾಗಿ ಇಂದು ಕಡಿಮೆ ಅವಧಿಯ ಟೈಬ್ರೇಕರ್ ಪಂದ್ಯ ನಡೆಯಲಿದ್ದು, ಇಂದಿನ ಪಂದ್ಯದಲ್ಲಿ ವಿಜೇತರ ತೀರ್ಮಾನವಾಗಲಿದೆ. ಒಂದು ವೇಳೆ ಇಂದು ಪ್ರಜ್ಞಾನಂದ ಗೆದ್ದರೆ ವಿಶ್ವನಾಥನ್ ಆನಂದ್ ಬಳಿಕ ಈ ಸಾಧನೆ ಮಾಡಿದ ಭಾರತೀಯ ಎಂಬ ಹೆಮ್ಮೆಗೆ ಪಾತ್ರರಾಗಲಿದ್ದಾರೆ.