ಡುಬ್ಲಿನ್: ಭಾರತ ಮತ್ತು ಐರ್ಲೆಂಡ್ ನಡುವಿನ ಮೂರನೇ ಟಿ20 ಪಂದ್ಯ ವಾಶ್ ಔಟ್ ಆಗಿದ್ದು ಸರಣಿ ಟೀಂ ಇಂಡಿಯಾ ಪಾಲಾಗಿದೆ.
ಮೂರನೇ ಪಂದ್ಯದಲ್ಲಿ ಟಾಸ್ ಕೂಡಾ ನಡೆಯಲು ವರುಣ ಅವಕಾಶ ಕೊಡಲಿಲ್ಲ. ಇದರಿಂದಾಗಿ ಪಂದ್ಯವನ್ನು ಅನಿವಾರ್ಯವಾಗಿ ರದ್ದುಗೊಳಿಸಬೇಕಾಯಿತು.
ನಾಯಕ ಜಸ್ಪ್ರೀತ್ ಬುಮ್ರಾರಿಗೆ ಸರಣಿ ಶ್ರೇಷ್ಠ ಪ್ರಶಸ್ತಿ ಒಲಿಯಿತು. ಇನ್ನೀಗ ಟೀಂ ಇಂಡಿಯಾ ಹಿರಿಯರ ಪಡೆ ಪ್ರತಿಷ್ಠಿತ ಏಷ್ಯಾ ಕಪ್ ಆಡಲಿದೆ.