ಬಾಕು: ಭಾರತವೇ ಕಾತುರದಿಂದ ಕಾಯುತ್ತಿದ್ದ ವಿಶ್ವಕಪ್ ಚೆಸ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯದಲ್ಲಿ ಕಾರ್ಲ್ಸನ್ ವಿರುದ್ಧ ಭಾರತದ ಆರ್. ಪ್ರಜ್ಞಾನಂದ ಮೊದಲ ಪಂದ್ಯವನ್ನು ಡ್ರಾ ಮಾಡಿಕೊಂಡಿದ್ದಾರೆ.
ಇಂದು ಎರಡನೇ ಸುತ್ತಿನ ಪಂದ್ಯದಲ್ಲಿ ಫಲಿತಾಂಶ ಬರುವ ಸಾಧ‍್ಯತೆಯಿದೆ. ಮೊದಲ ಪಂದ್ಯದಲ್ಲಿ 35 ನಡೆಗಳ ಬಳಿಕ ಪಂದ್ಯ ಡ್ರಾನಲ್ಲಿ ಅಂತ್ಯವಾಗಿದೆ. ಇಬ್ಬರೂ ಸಮಬಲದ ಪ್ರದರ್ಶನ ನೀಡಿದ್ದಾರೆ.
ಈ ಪಂದ್ಯ ಎರಡು ಸುತ್ತುಗಳ ಕ್ಲಾಸಿಕಲ್ ಸೀರೀಸ್ ಆಗಿದ್ದು, ಇಂದು ನಡೆಯಲಿರುವ ದ್ವಿತೀಯ ಸುತ್ತಿನಲ್ಲಿ ಗೆದ್ದವರು ಚಾಂಪಿಯನ್ ಆಗಲಿದ್ದಾರೆ. ಒಂದು ವೇಳೆ ಇಂದೂ ಪಂದ್ಯ ಡ್ರಾಗೊಂಡರೆ ನಾಳೆ ನಡೆಯಲಿರುವ ಟೈ ಬ್ರೇಕರ್ ನಲ್ಲಿ ಫಲಿತಾಂಶ ನಿರ್ಧಾರವಾಗಲಿದೆ.