ಅನಧಿಕೃತವಾಗಿ ವೈಟ್ ಬೋರ್ಡ್ ನಲ್ಲಿ ಮಕ್ಕಳನ್ನ ಕರೆದೊಯ್ಯುವ ಕುರಿತು ದೂರುಗಳು ಬಂದಿತ್ತು.ಹೀಗಾಗಿ ಇಂದು ಶಾಲಾ ವಾಹನಗಳನ್ನ ತಡೆದು ಪರಿಶೀಲನೆ ನಡೆಸಲಾಗಿದೆ.ಅನಧಿಕೃತವಾಗಿ ಮಕ್ಕಳನ್ನ ಕರೆದೊಯ್ತುತ್ತಿದ್ದ 15 ಕ್ಕೂ ಅಧಿಕ ಒಮಿನಿ ಕಾರುಗಳು ವಶಕ್ಕೆ ಪಡೆಯಲಾಗಿದೆ.ಶಾಲಾ ಬಸ್ ಗಳನ್ನೂ ತಡೆದು ದಾಖಲಾತಿ ಪರಿಶೀಲನೆ ನಡೆಸಿದ್ದು,ಶಾಲಾ ಮಕ್ಕಳ ಸುರಕ್ಷತೆ ಕ್ರಮಗಳಿಲ್ಲ ಅನ್ನೋ ಕಾರಣದಿಂದ ಕಾರ್ಯಾಚರಣೆ ನಡೆಸಲಾಗಿದೆ.ಹೀಗಾಗಿ ಇಂದು ಶಾಲಾ ವಾಹನಗಳನ್ನ ತಡೆದು ಪರಿಶೀಲನೆ ವೇಳೆ ನಿಯಮ ಬಾಹಿರವಾಗಿ ಮಕ್ಕಳನ್ನ ಶಾಲೆಗೆ ಕರೆದೊಯ್ಯುತ್ತಿದ್ದ ವಾಹನಗಳನ್ನ ವಶಕ್ಕೆ ಪಡೆಯಲಾಗಿದೆ.
ಸಾರಿಗೆ ಇಲಾಖೆ ಜಂಟಿ ಆಯುಕ್ತರಾದ ಶೋಭ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಅನಧಿಕೃತವಾಗಿ ಮಕ್ಕಳನ್ನ ಕರೆದೊಯ್ತುತ್ತಿದ್ದ 15 ಕ್ಕೂ ಅಧಿಕ ಒಮಿನಿ ಕಾರುಗಳು ವಶಕ್ಕೆ ಪಡೆಯಲಾಗಿದೆ,ಶಾಲಾ ಬಸ್ ಗಳನ್ನೂ ತಡೆದು ಪರಿಶೀಲನೆ ನಡೆಸಿದ ವೇಳೆ ಸಿಸಿ ಕ್ಯಾಮರ, ಫಸ್ಟ್ ಎಡ್ ಬಾಜ್ಸ್ ಹಾಗೂ ಗ್ರಿಲ್ ಇಲ್ಲದ ಶಾಲಾ ವಾಹನಗಳನ್ನ ಸೀಜ್ ಮಾಡಲಾಗಿದೆ.