Publish Date: Tue, 22 Aug 2023 (08:04 IST)
Updated Date: Tue, 22 Aug 2023 (08:44 IST)
ಶಿವಮೊಗ್ಗ: ಈದ್ ಮಿಲಾದ್ ಹಬ್ಬದ ಸಂಬಂಧ ಸಮಿತಿ ರಚನೆ ವಿಚಾರದಲ್ಲಿ ಇಬ್ಬರ ನಡುವೆ ಗಲಾಟೆ ನಡೆದು, ಓರ್ವ ಯುವಕನನ್ನ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಜಿಲ್ಲೆಯ ಶಿಕಾರಿಪುರದ ಕೆಹೆಚ್ಬಿ ಬಡಾವಣೆಯಲ್ಲಿ ನಡೆದಿದೆ.
ಕೊಲೆಯಾದ ಯುವಕನನ್ನು ಜಾಫರ್ (32) ಎಂದು ಗುರುತಿಸಲಾಗಿದೆ. ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ಭಾನುವಾರ ಮುಸ್ಲಿಂ ಮುಖಂಡರು ಸಭೆ ಕರೆದಿದ್ದರು. ಸಭೆಯಲ್ಲಿ ಹಲವರು ಭಾಗವಹಿಸಿದ್ದರು. ಹಬ್ಬದ ವಿಷಯ ಕುರಿತು ಚರ್ಚೆ ನಡೆಯುತ್ತಿದ್ದ ವೇಳೆ ಗಲಾಟೆ ನಡೆದಿದೆ. ಗಲಾಟೆಯಾದ ಕಾರಣ ಸಭೆಯನ್ನ ಅರ್ಧಕ್ಕೆ ಮೊಟುಕುಗೊಂಡಿದೆ.
ಸೋಮವಾರ ಮಧ್ಯಾಹ್ನ ಗಲಾಟೆ ನಡೆದ ಯುವಕರ ನಡುವೆ ರಾಜಿ ಸಂಧಾನ ನಡೆಸಲು ಎರಡು ಗುಂಪಿನ ಯುವಕರನ್ನ ಕರೆಸಿದ್ದರು. ಆದರೆ ಮತ್ತೆ ಪುನಃ ಗಲಾಟೆ ನಡೆದು, ಜಾಫರ್ ಎಂಬಾತನ ಎದೆಗೆ ಚಾಕು ಇರಿದು ಕೊಲೆ ಮಾಡಿದ್ದಾರೆ.