Publish Date: Sun, 20 Aug 2023 (12:55 IST)
Updated Date: Sun, 20 Aug 2023 (12:58 IST)
ಮೈಸೂರು : ಚಾಕುವಿನಿಂದ ಇರಿದು ಯುವಕನ ಹತ್ಯೆಗೈದಿರುವ ಘಟನೆ ಮೈಸೂರಿನ ವಿದ್ಯಾನಗರ ಬಡಾವಣೆಯ 4ನೇ ಕ್ರಾಸ್ನಲ್ಲಿ ನಡೆದಿದೆ.
ಮೈಸೂರಿನ ವಿದ್ಯಾನಗರ ನಿವಾಸಿ ಬಾಲರಾಜ್ (26) ಕೊಲೆಯಾದ ಯುವಕ. ಚಾಕುವಿನಿಂದ ಇರಿದು ಯುವಕನ ಕೊಲೆ ಮಾಡಲಾಗಿದೆ. ನಾಲ್ವರಿಂದ ಕೃತ್ಯ ನಡೆದಿರುವುದಾಗಿ ಆರೋಪಿಸಲಾಗಿದ್ದು, ಕೊಲೆಗೆ ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ.
ಘಟನೆಗೆ ಸಂಬಂಧಿಸಿದಂತೆ ಆರೋಪಿಗಳಾದ ತೇಜಸ್, ಸಂಜಯ್, ಕಿರಣ್ ಹಾಗೂ ಸಾಮ್ರಾಟ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ನಜರ್ಬಾದ್ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.