ಬಾಕಾ: ಒಂದೆಡೆ ಭಾರತ ಚಂದ್ರಯಾನ 3 ಮೂಲಕ ಇಡೀ ವಿಶ್ವವೇ ತಿರುಗಿ ನೋಡುವಂತೆ ಮಾಡುತ್ತಿದ್ದರೆ ಮತ್ತೊಂದು ಭಾರತದ ಚೆಸ್ ಪ್ರತಿಭೆ ಆರ್. ಪ್ರಜ್ಞಾನಂದ ಭಾರತಕ್ಕೆ ಮತ್ತೊಂದು ಹೆಮ್ಮೆ ತಂದಿತ್ತಿದ್ದಾರೆ.
ಬಾಕಾದಲ್ಲಿ ನಡೆಯುತ್ತಿರುವ ವಿಶ್ವಕಪ್ ಚೆಸ್ ನಲ್ಲಿ ವಿಶ್ವ ನಂ.1 ಕಾರ್ಲ್ಸನ್ ವಿರುದ್ಧ ಫೈನಲ್ ಪಂದ್ಯವಾಡುತ್ತಿರುವ ಭಾರತದ 18 ವರ್ಷದ ಯುವ ಪ್ರತಿಭೆ ಪ್ರಜ್ಞಾನಂದ ಇಂದು ಎರಡನೇ ದಿನವೂ ಪ್ರಬಲ ಪೈಪೋಟಿ ನೀಡಿ ಪಂದ್ಯ ಡ್ರಾ ಮಾಡಿಕೊಂಡಿದ್ದಾರೆ. ಎರಡನೇ ದಿನವೂ ಪಂದ್ಯ ಡ್ರಾ ಆಗಿದ್ದರಿಂದ ನಾಳೆಯ ಟೈಬ್ರೇಕರ್ ನಲ್ಲಿ ಪಂದ್ಯದ ಫಲಿತಾಂಶ ನಿರ್ಧಾರವಾಗಲಿದೆ.
ಇಂದೂ ಕೂಡಾ ಕಾರ್ಲ್ಸನ್ ಗೆ ಕಠಿಣ ಪೈಪೋಟಿ ಒಡ್ಡಿದ ಪ್ರಜ್ಞಾನಂದ ಪಂದ್ಯದ ರೋಚಕತೆಯನ್ನು ನಾಳೆಯವರೆಗೆ ಉಳಿಸಿಕೊಂಡಿದ್ದಾರೆ.